ಫೆ. 24, 26: ಬೆಂಗಳೂರಲ್ಲಿ ಏರ್‌ಫೋರ್ಸ್‌ಗೆ ನೇಮಕ
ಉಡುಪಿ, ಫೆ.22: ಭಾರತೀಯ ವಾಯುಪಡೆ ಗ್ರೂಫ್ ವೈ (ಮೆಡಿಕಲ್ ಸಹಾಯಕ) ಹಾಗೂ ಗ್ರೂಪ್ ‘ಎಕ್ಸ್’ (ಶಿಕ್ಷಣ ಬೋಧಕ) ಹುದ್ದೆಗಳಿಗೆ ನೇಮಕಾತಿ ರ್ಯಾಲಿ ಫೆ.24 ಮತ್ತು 26ರಂದು ಬೆಂಗಳೂರು ಕಬ್ಬನ್ ರೋಡ್‌ನ ಮಾಣಿಕ್‌ಷಾ ಪೆರೆಡ್ ಮೈದಾನದಲ್ಲಿ ನಡೆಯಲಿದೆ ಎಂದು ಇಂಡಿಯನ್ ಏರ್‌ಪೋರ್ಸ್‌ನ ಪ್ರಕಟಣೆ ತಿಳಿಸಿದೆ.
ಕರ್ನಾಟಕದ ಅವಿವಾಹಿತ ಭಾರತೀಯ ನಾಗರಿಕ ಈ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ಗ್ರೂಫ್ ವೈ ಹುದ್ದೆಗೆ 2000 ಜ.17ರಿಂದ 2003ರ ಡಿ.30ರೊಳಗೆ ಜನಿಸಿದ ಯುವಕ ಫೆ.24ರಂದು ನಡೆಯುವ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿ ಪಿಸಿಬಿ ಹಾಗೂ ಇಂಗ್ಲೀಷ್ ವಿಷಯಗಳೊಂದಿಗೆ ಪಿಯುಸಿಯಲ್ಲಿ ಶೇ.50 ಮಾರ್ಕ್‌ಗಳೊಂದಿಗೆ ತೇರ್ಗಡೆಗೊಂಡಿರಬೇಕು ಹಾಗೂ ಫಾರ್ಮಸಿಯಲ್ಲಿ ಡಿಪ್ಲೋಮ ಪದವಿ ಪಡೆದಿರಬೇಕು.
ಫೆ.26ರಂದು ನಡೆಯುವ ಗ್ರೂಪ್ ಎಕ್ಸ್ ಹುದ್ದೆಗೆ 1996ರ ಜ.17 ಹಾಗೂ 2000 ಡಿ.30ರೊಳಗೆ ಜನಿಸಿದ ಅಭ್ಯರ್ಥಿ ಬಿಎ, ಬಿಎಸ್ಸಿ, ಬಿಸಿಎ ಪದವಿಯೊಂದಿಗೆ ಕಡ್ಡಾಯವಾಗಿ ಬಿಎಡ್ ಡಿಗ್ರಿ ಪಡೆದಿರಬೇಕು. ಅಥವಾ 1993ರ ಜ.17ರಿಂದ 2000 ಡಿ.30ರೊಳಗೆ ಜನಿಸಿದ ಅಭ್ಯರ್ಥಿ ಎಂಎ (ಇಂಗ್ಲೀಷ್/ ಸೈಕಾಲಜಿ), ಅಥವಾ ಎಂಎಸ್ಸಿ (ಭೌತಶಾಸ್ತ್ರ, ಗಣಿತ, ಕಂಪ್ಯೂಟರ್ ಸಾಯನ್ಸ್, ಸಂಖ್ಯಾಶಾಸ್ತ್ರ, ಐಟಿ ಅಥವಾ ಎಂಸಿಎ) ಸ್ನಾತಕ ಪದವಿಯೊಂದಿಗೆ ಬಿಎಡ್‌ನ್ನು ಮಾಡಿರಬೇಕು.
ನೇಮಕ ರ್ಯಾಲಿ ಉಚಿತವಾಗಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಮೂಲ ದಾಖಲೆ, ಮಾರ್ಕ್ಸ್ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ಹೊಂದಿರಬೇಕು. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಳನ್ನು ಏರ್‌ಪೋರ್ಸ್‌ನ ವೆಬ್‌ಸೈಟ್‌ನಿಂದ (www.airmenselection.cdac.in) ಪಡೆಯ ಬಹುದು ಅಥವಾ 7 ಏರ್‌ಮೆನ್ ಸೆಲೆಕ್ಷನ್ ಸೆಂಟರ್, ನಂ.1,ಕಬ್ಬನ್ ರೋಡ್, ಬೆಂಗಳೂರು-560001, (ದೂರವಾಣಿ ಸಂಖ್ಯೆ:080-25592199) ಇವರನ್ನು ಸಂಪರ್ಕಿಸಬಹುದು ಎಂದು ಏರ್‌ಪೋರ್ಸ್ ಪ್ರಕಟಣೆ ತಿಳಿಸಿದೆ.