ಇಟಲಿಯಲ್ಲಿ ಕೊರೋನವೈರಸ್‌ಗೆ ಮೊದಲ ಬಲಿ
Update: 2020-02-22 21:51 IST
ರೋಮ್ (ಇಟಲಿ), ಫೆ. 22: ಯುರೋಪ್‌ನಲ್ಲಿ ಶುಕ್ರವಾರ ಮೊದಲ ಕೊರೋನವೈರಸ್ ಸಾವು ಸಂಭವಿಸಿದೆ. ಇಟಲಿಯ ವೆನೆಟೊ ವಲಯದ 78 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು.
ಅವರನ್ನು ಬೇರೊಂದು ಆರೋಗ್ಯ ಸಮಸ್ಯೆಗಾಗಿ 10 ದಿನಗಳ ಹಿಂದೆ ಆಸ್ಪತ್ರೆಗೆ ಸೇರಿಸಲಾಗಿತ್ತು ಎಂದುದ ಇಟಲಿಯ ಆರೋಗ್ಯ ಸಚಿವರು ತಿಳಿಸಿದರು.
ಇಟಲಿಯಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದ ಬಳಿಕ, ದೇಶದ 10 ಪಟ್ಟಣಗಳಿಗೆ ಬೀಗಮುದ್ರೆ ಹಾಕಲಾಗಿದೆ.