×
Ad

ಎಸ್.ಎಂ.ಆರ್ ಸ್ಕೂಲ್ ನಲ್ಲಿ ಫುಡ್ ಫೆಸ್ಟಿವಲ್

Update: 2020-02-22 22:31 IST

ಬಂಟ್ವಾಳ: ಎಸ್ ಎಂ ಆರ್ ಸ್ಕೂಲ್ ನಲ್ಲಿ ಬೃಹತ್ ಫುಡ್ ಫೆಸ್ಟಿವಲ್ ಕಾರ್ಯಕಮವು ವಿಜ್ರಂಭನೆಯಿಂದ ನಡೆಯಿತು.

ಬಂಟ್ವಾಳ ನಗರ  ಶಿಕ್ಷಣಾಧಿಕಾರಿ ಸುಶೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಡೆಲ್ಫಿನ್ ಹಾಗೂ ರೇಷ್ಮಾ ಉಪಸ್ಥಿತರಿದ್ದರು.

ಸಂಸ್ಥೆಯ ಚೈರ್ಮನ್ ಎಸ್ ಎಂ ರಶೀದ್ ಹಾಜಿ ಕಾರ್ಯಕ್ರಮವನ್ನು ಶ್ಲಾಘಿಸಿದರು. ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಅಂಬರ್ ಕಂಪನಿಯ ಮಾಲಕ ಝುಬೈರ್ ಸಂಸ್ಥೆಯ ಉನ್ನತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಡಾಕ್ಟರೇಟ್ ಪದವಿ ಪಡೆದ ಬಜಾಜ್ ಐಸ್ ಕ್ರೀಮ್ ಕಂಪನಿಯ ಮಾಲಕರಾದ ಗೋಪಾಲಕೃಷ್ಣ ಆಚಾರ್ಯ ರಿಗೆ  ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯಿನಿ ಶಾಹಿಸ್ಥ, ಸಂಚಾಲಕರಾದ ಬಿಕೆ ಲತೀಫ್ ಹಾಗೂ ಇನ್ನಿತರ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News