ಬೆಳಪುವಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ
ಪಡುಬಿದ್ರಿ : ಮನು ಸಂವಿಧಾನ ಜಾರಿಗೆ ತರಲು ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಪೌರತ್ವ ಕಾಯ್ದೆ ವಿರುದ್ಧ ಜನರಲ್ಲಿ ಜನಜಾಗೃತಿ ಮೂಡಿಸಬೇಕಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ ) ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಹೇಳಿದರು.
ಬೆಳಪು - ಮಲ್ಲಾರು ಮುಸ್ಲಿಂ ಒಕ್ಕೂಟದ ಆಶ್ರಯದಲ್ಲಿ ಶನಿವಾರ ಬೆಳಪು ಮೈದಾನದಲ್ಲಿ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ವಿರೋಧಿಸಿ ನಡೆದ 'ನಾವು ಭಾರತೀಯರು' ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನು ಸಂಸ್ಕೃತಿ ಜಾರಿಗೆ ತರಲು, ಕೋಮು ಬೆಳೆಯಲು ಕಾರಣ ಮನುವಾದಿಗಳು. ಈ ಮನುವಾದಿಗಳು ಅಲ್ಪಸಂಖ್ಯಾತರು, ದಲಿತರು, ಹಿಂದು ಳಿದವರನ್ನು ಒಂದಾಗಲು ಬಿಡುವುದಿಲ್ಲ. ಮೂಲ ನಿವಾಸಿಗಳು ವರ್ಣಾಶ್ರಮದಿಂದ ಬೇಸತ್ತು ಬೇರೆ ಬೇರೆ ಧರ್ಮಗಳಿಗೆ ಮತಾಂತರ ಗೊಂಡಿದ್ದಾರೆ. ಈ ಕಾಯ್ದೆಯ ಹಿಂದೆ ಆರೆಸ್ಸೆಸ್ ಕಾರ್ಯಾಚರಿಸುತ್ತಿದೆ ಎಂದರು.
ಬೆಳಪು ಗ್ರಾಮ ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಈ ಕಾಯ್ದೆ ದೇಶ ಪ್ರತಿಯೊರ್ವರಿಗೂ ಮಾರಕವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೋರ್ವ ದೇಶದ ಪ್ರತಜೆಯು ಈ ಬಗ್ಗೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಸಂವಿಧಾನ ಬದ್ಧವಾಗಿ ಪ್ರತಿಭಟಿಸುವ ಹಕ್ಕು ಪ್ರತಿಯೋರ್ವರಿಗೂ ಇದೆ. ಅದನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈ ಹೋರಾಟದ ಬಗ್ಗೆ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಗಳು ನಡೆಯುತ್ತಿದೆ. ಇದಕ್ಕೆ ಅವಕಾಶ ಮಾಡಬಾರದು. ಶಾಂತಿಯುತ ಪ್ರತಿಭಟನೆಯಿಂದ ಈ ಹೋರಾಟದಲ್ಲಿ ಯಶಸ್ಸು ಇದೆ ಎಂದರು.
ಕೇಂದ್ರ ಸರಕಾರದ ಜನವಿರೋಧಿ ಕಾಯ್ದೆಗಳಾದ ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಎ ವಿರುದ್ಧದ ಹೋರಾಟಕ್ಕೆ ಎಲ್ಲೆಡೆ ಸಾರ್ವಜನಿಕರಿಂದ ಉತ್ತಮ ಸಹಕಾರ ದೊರಕುತ್ತಿದೆ. ಆದರೆ ಈ ಚಳವಳಿಯ ದಿಕ್ಕು ತಪ್ಪಿಸಲು ದೇಶದಾದ್ಯಂತ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಮೀರಿ ಕೂಡಾ ನಾವು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಒಗ್ಗೂಡಿ ಹೋರಾಡುವ ಅನಿರ್ವಾಯತೆಯಿದೆ ಎಂದು ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಹೇಳಿದರು.
ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತ ನಿಗಮದ ಮಾಜಿ ಅಧ್ಯಕ್ಷ ಎಂ.ಎ. ಗಪೂರ್, ಸಿಪಿಐ ಮುಖಂಡ ಸುನಿಲ್ ಕುಮಾರ್ ಬಜಾಲ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಕಾರ್ಯದರ್ಶಿ ಅಮ್ರೀನ್ ನಾಜ್, ಪತ್ರಕರ್ತ ಚಿಂತನ್ ಎಂ.ಸಿ. ಬೆಂಗಳೂರು, ಎಸ್.ಎಸ್.ಎಫ್ ಉಡುಪಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮಹಮ್ಮದ್ ರಕೀಬ್ ಕನ್ನಂಗಾರ್, ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್‍ನ ಆಲಿ ಉಮರ್ ಕಾಪು ಮುರ್ಕಝ್, ಕೆಮ್ಮಣ್ಣು ಚರ್ಚ್ ಧರ್ಮಗುರು ಫಾ. ಹೆರಾಲ್ಡ್ ಪಿರೇರಾ, ಬಹುಜನ ಕ್ರಾಂತಿ ಮೋರ್ಚಾದ ಚಂದ್ರ ಅಲ್ತಾರ್, ಎಸ್.ಐ.ಒ. ಶಾರೂಕ್ ತೀರ್ಥಹಳ್ಳಿ, ಬಹುಜನ ಕ್ರಾಂತಿ ಮೋರ್ಚಾದ ನಝೀರ್ ಬೆಳ್ವಾಯಿ ಮಾತನಾಡಿದರು.
ಯುವ ಕವಿ ಹಿದಾಯತ್ ಕುಂಡ್ಲೂರು ಕವನ ವಾಚಿಸಿದರು. ತಾ.ಪಂ. ಸದಸ್ಯ ಯು.ಸಿ. ಶೇಖಬ್ಬ, ಮುಸ್ಲಿಮ್ ಒಕ್ಕೂಟದ ಶಫಿ ಅಹ್ಮದ್ ಕಾಝಿ, ಬೆಳಪು-ಮಲ್ಲಾರು ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ ಎನ್. ಅಬ್ಬಾಸ್ ಫಕೀರ್ಣಕಟ್ಟೆ, ವಿವಿಧ ಮಸೀದಿಗಳ ಅಧ್ಯಕ್ಷರಾದ ಕರೀಮ್ ಬೆಳಪು, ಎನ್. ಅಬ್ಬಾಸ್ ಫಕೀರ್ಣಕಟ್ಟೆ, ಹಫೀಝ್ ಬೆಳಪು, ರಫೀಕ್ ಖಾನ್ ಬೆಳಪು, ನಝೀರ್ ಅಹ್ಮದ್ , ಬಿಝರ್ ಮಲ್ಲಾರ್, ಯೂನುಸ್ ಮಲ್ಲಾರು, ಅಬ್ದುಲ್ ಹಮೀದ್ ಬೆಳಪು, ಸೈಯ್ಯದ್ ಅಹ್ಮದ್ ಮಲ್ಲಾರು, ಅಬ್ದುಲ್ ಹಮೀದ್ ಪಣಿಯೂರು, ಸಂಘಟಕರಾದ ಬಶೀರ್ ಅಹ್ಮದ್ ಮಲ್ಲಾರ್, ಅಕ್ರಂ ಮೆಹ್ತಾಬ್ ಬೆಳಪು, ಖಾಲಿದ್ ಅಹ್ಮದ್, ಮಯ್ಯದ್ದಿ ಅಬ್ದುಲ್ ಖಾದರ್ ಬೆಳಪು, ಮುಹಿಯುನುದ್ದೀನ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖ್ ಮುಹಮ್ಮದ್ ಸ್ವಾಲಿಹ್ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಶಫಿಕ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು. ಬೆಳಪು - ಮಲ್ಲಾರು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಫಹೀಮ್ ಬೆಳಪು ವಂದಿಸಿದರು.