×
Ad

ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ಇಮ್ತಿಯಾಝ್ ಆಹ್ಮದ್ ಜುಬಾಪು

Update: 2020-02-22 22:46 IST

ಭಟ್ಕಳ: ರಾಜ್ಯದ ಪ್ರತಿಷ್ಠಿತ ಅರ್ಬನ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ 'ದಿ ಭಟಕಳ ಅರ್ಬನ್ ಕೋ-ಆಪರೇಟಿವ್' ಬ್ಯಾಂಕಿನ ಪದಾಧಿಕಾರಿಗಳ ಚುನಾವಣೆ ಶನಿವಾರ ನಡೆಯಿತು. ಅಧ್ಯಕ್ಷರಾಗಿ ಇಮ್ತಿಯಾಝ್ ಅಹ್ಮದ್ ಜುಬಾಪು ಹಾಗೂ ಉಪಾಧ್ಯಕ್ಷರಾಗಿ ಮಧುಕೇಶ್ವರ ರಾಮಕೃಷ್ಣ ನಾಯ್ಕ ಆಯ್ಕೆಯಾದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ವಿ.ಹೆಚ್.ಗೌಡ ಅವರು ಚುನಾವಣಾಧಿಕಾರಿಯಾಗಿ ಚುನಾವಣಾ ಕಾರ್ಯಕಲಾಪವನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News