ಬೆಳ್ತಂಗಡಿ : ಕಳವು ಪ್ರಕರಣ ; ಸೊತ್ತ ಸಹಿತ 3 ಮಂದಿ ಆರೋಪಿಗಳು ಸೆರೆ
ಬೆಳ್ತಂಗಡಿ : ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಕಳವು ಪ್ರಕರಣಕ್ಕೆ ಸಂಬಂದಿಸಿದಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿಯವರ ತಂಡದ ಖಚಿತ ಮಾಹಿತಿಯ ಮೇರೆಗೆ ತನಿಖೆ ನಡೆಸುತ್ತಿದ್ದ ಸಂದರ್ಭ ಕುವೆಟ್ಟುಗ್ರಾಮದ ಪೊಟ್ಟುಕೆರೆ ಎಂಬಲ್ಲಿ ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಮುಂಡಾಜೆ ದೇವಿಗುಡಿ ಬಳಿ ಶಾಂತಿ ನಿವಾಸ ನಿವಾಸಿ ಸತೀಶ(33), ಪುತ್ತೂರು ಆರ್ಯಾಪುದರ್ಬೆ ಮೂಂಕ್ರುಪಾಡಿ ನಿವಾಸಿ ರವಿ (29), ಮಂಗಳೂರು ಕುಡುಪು ಗ್ರಾಮ ನೀರುಮಾರ್ಗ ಪಾಲ್ದಣೆ ಮನೆ ನಿವಾಸಿ ಹರೀಶ್ ಪೂಜಾರಿ (29) ಬಂಧಿತರು.
ಬಂಧಿತರನ್ನು ವಿಚಾರಣೆ ನಡೆಸಿದ ವೇಳೆ ಬೆಳ್ತಂಗಡಿಯ ತೆಂಕಕಾರಂದೂರು, ಕಾಪಿನಡ್ಕ, ಗಾಂಧಿನಗರ, ನಿಡ್ಲೆಯ ಬೂಡುಜಾಲು ಮತ್ತು ಚಿಬಿದ್ರೆಯಲ್ಲಿ ಕಳವು ನಡೆಸಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೋರ್ವ ಆರೋಪಿ ಮಣಿಕಂಠ ತಲೆಮರೆಸಿದ್ದು, ಆರೋಪಿಗಳ ವಿರುದ್ಧ ಈಗಾಗಲೇ ಪುತ್ತೂರು, ವಿಟ್ಲ, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ನಗರ ಹಾಗೂ ಕಾಸರಗೋಡು, ಭಟ್ಕಳ ಮುಂತಾದ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಿಂದ ಚಿನ್ನಾಭರಣ, ಲ್ಯಾಪ್‍ಟ್ಯಾಪ್, ಮೊಬೈಲ್, ಎರಡು ಬೈಕ್ ಗಳು, ನಾಲ್ಕು ಮೊಬೈಲ್ ಸೇರಿದಂತೆ ಒಟ್ಟು 5,50,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.