ನೇರಳಕಟ್ಟೆ : ಶಾಲಾ ಶತಮಾನೋತ್ಸವ ಸಮಿತಿ ಸಭೆ

Update: 2020-02-23 13:45 GMT

ವಿಟ್ಲ : ನೇರಳಕಟ್ಟೆಯ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಮಿತಿಯ ರಚನಾ ಸಭೆಯ ರವಿವಾರ ಇಲ್ಲಿನ ಉರ್ದಿಲಗುತ್ತು ಪಟೇಲ್ ಕೆ. ಇಂದುಹಾಸ ರೈ ಸಭಾಂಗಣದಲ್ಲಿ ನಡೆಯಿತು.

ಉರ್ದಿಲಗುತ್ತು ಲಕ್ಷ್ಮಿ ಕೆ ಹೆಗ್ಡೆ ಸಭೆಯ ಅದ್ಯಕ್ಷತೆ ವಹಿಸಿದ್ದರು.  ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಜಿ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಮಾತನಾಡಿ ಶಾಲಾ ಶತಮಾನೋತ್ಸವದ ಹಾಗೂ ಸಾರ್ವಜನಿಕರು ಮತ್ತು ಹಳೆ ವಿದ್ಯಾರ್ಥಿಗಳ ಹೊಣೆಗಾರಿಕೆಯ ಬಗ್ಗೆ ಮಾಹಿತಿ ನೀಡಿದರು.

ನೆಟ್ಲಮುಡ್ನೂರು ಗ್ರಾಮ ಪಂಚಾಯತು ಅದ್ಯಕ್ಷ ವಿಜಯ, ಶಾಲಾಭಿವೃದ್ದಿ ಸಮಿತಿ ಅದ್ಯಕ್ಷ  ರೋಹಿತಾಶ್ವ, ಹಮೀದ್ ಪರ್ಲೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿ,ಸಹ ಶಿಕ್ಷಕರಾದ ಗೀತಾ ಕೆ ವಂದಿಸಿದರು, ಸುಧಾಕರ ಕಾರ್ಯಕ್ರಮ ನಿರೂಪಿಸಿಧರು.

ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು : ಅಧ್ಯಕ್ಷರಾಗಿ ಉರ್ದಿಲ ಗುತ್ತು ರಾಮ್ ಪ್ರಸಾದ್ ರೈ , ಕಾರ್ಯಾಧ್ಯಕ್ಷರಾಗಿ  ನಿರಂಜನ್ ರೈ ಕುರ್ಲೆತ್ತಿಮಾರ್, ಉಪಾಧ್ಯಕ್ಷರಾಗಿ ಶ್ರೀಧರ ರೈ , ಸುರೇಶ್ ರೈ , ಡಿ.ತನಿಯಪ್ಪ ಗೌಡ, ಮತ್ತು ಬೇಬಿ ನಾಯ್ಕ, ಕಾರ್ಯದರ್ಶಿಯಾಗಿ  ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಕೆ.ಎಸ್, ಜೊತೆ ಕಾರ್ಯದರ್ಶಿಯಾಗಿ ಪ್ರೇಮನಾಥ ಶೆಟ್ಟಿ, ಗೌರವ ಸಲಹೆಗಾರ ಗೋಪಾಲಕೃಷ್ಣ ನೇರಳಕಟ್ಟೆ ಹಾಗೂ ಕೋಶಾಧಿಕಾರಿಯಾಗಿ ವಿಶುಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾದರು.

ಹಿರಿಯ ವಿಧ್ಯಾರ್ಥಿ ಸಂಘದ ಪದಾಧಿಕಾರಿಗಳು: ಅಧ್ಯಕ್ಷರಾಗಿ  ವಿಠ್ಠಲ ನಾಯ್ಕ್, ಉಪಾಧ್ಯಕ್ಷರಾಗಿ ಅಶೋಕ್ ರೈ, ಪ್ರೇಮಾ, ರಝಾಕ್ ಸಾಹೇಬ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ನೇರಳಕಟ್ಟೆ, ಜತೆ ಕಾರ್ಯದರ್ಶಿಯಾಗಿ ಪ್ರಕಾಶ್ ರೈ, ಹಾಗೂ ಗೌರವಾಧ್ಯಕ್ಷರಾಗಿ ಶ್ರೀನಿವಾಸ ಗೌಡ ಆಯ್ಕೆಗೊಂಡರು.

ನಿರಂಜನ್ ರೈ

ವಿಠ್ಠಲ ನಾಯ್ಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News