ಕೃಷಿಯಿಂದ ಆರೋಗ್ಯ, ನೆಮ್ಮದಿ ದೊರೆಯಲು ಸಾಧ್ಯ: ಮುನಿರಾಜ

Update: 2020-02-23 14:11 GMT

ಉಡುಪಿ, ಫೆ. 23: ಕೃಷಿ ಉದ್ಯೋಗ ಅಲ್ಲ. ಅದು ಬದುಕು ಆಗಿದೆ. ಅದಕ್ಕೆ ಬೇರೆ ಉದ್ಯೋಗಗಳಂತೆ ಸಮಯದ ಮಿತಿ ಎಂಬುದು ಇಲ್ಲ. ಆರೋಗ್ಯ ಮತ್ತು ನೆಮ್ಮದಿ ಒಳ್ಳೆಯ ರೈತನಿಗೆ ಮಾತ್ರ ಸಿಗಲು ಸಾಧ್ಯ. ದುಡಿಯುವುದರಿಂದ ಆರೋಗ್ಯ ಸಿಕ್ಕಿದರೆ, ತಾನು ಬೆಳೆದ ಬೆಳೆಯಿಂದ ನೆಮ್ಮದಿಯನ್ನು ಪಡೆದು ಕೊಳ್ಳಬಹುದಾಗಿದೆ ಕಾರ್ಕಳದ ಚಿಂತಕ ಮುನಿರಾಜ ರೆಂಜಾಳ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ರವಿವಾರ ಕುಂಜಿಬೆಟ್ಟಿನಲ್ಲಿರುವ ಶ್ರೀಶಾರದಾ ಮಂಟಪದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ‘ರೈತ ಸಮಾವೇಶ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ರವಿವಾರ ಕುಂಜಿಬೆಟ್ಟಿನಲ್ಲಿರುವ ಶ್ರೀಶಾರದಾ ಮಂಟಪದಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ‘ರೈತ ಸಮಾವೇಶ’ದ ಉದ್ಘಾಟನಾ ಸಮಾರಂದಲ್ಲಿಅವರುದಿಕ್ಸೂಚಿಾಷಣ ಮಾಡಿದರು. ರೈತರ ಬದುಕೇ ನಿಜವಾದ ಅರ್ಥಪೂರ್ಣ ಬದುಕು ಆಗಿದೆ. ಆರೋಗ್ಯಕ್ಕಾಗಿ ವಾಕಿಂಗ್, ಮಡ್ ಥೆರಫಿ, ಜಿಮ್‌ಗಳನ್ನು ಮಾಡುವ ಜನರಿಗೆ ಇದೆಲ್ಲವೂ ಕೃಷಿಯಿಂದ ಸಿಗುತ್ತದೆ ಎಂಬ ಅರಿವು ಇಲ್ಲವಾಗಿದೆ. ಇಂದು ಕೃಷಿ ಸಂಸ್ಕೃತಿಯು ಬದಲಾಗುತ್ತಿದೆ. ಅದನ್ನು ಉಳಿಸಿಕೊಳ್ಳುವುದು ಇಂದಿನ ಅನಿವಾರ್ಯತೆ ಆಗಿದೆ. ಕೃಷಿಯಲ್ಲಿ ಆದಾಯದ ಕೊರತೆ ಇದೆ. ಅದನ್ನು ನಿವಾರಿಸುವ ಬಗ್ಗೆ ಚರ್ಚೆಗಳು ನಡೆಯಬೇಕಾಗಿದೆ. ಕೃಷಿ ಸಂಸ್ಕೃತಿಗೆ ಜಾತಿ, ಧರ್ಮ ಎಂಬ ಮಿತಿ ಇಲ್ಲ ಎಂದು ಅವರು ತಿಳಿಸಿದರು.

ಸಮಾವೇಶವನ್ನು ಉದ್ಘಾಟಿಸಿದ ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಉಡುಪಿ ವಲಯದ ಎಜಿಎಂ ಬಿ.ಗೋಪಾಲಕೃಷ್ಣ ಸಾಮಗ ಮಾತನಾಡಿ, ಕೃಷಿ ಸಾಲ ಮನ್ನಾದಲ್ಲಿ ಕೃಷಿಕರಿಗೆ ಅನ್ಯಾಯ ಆಗದಂತೆ ಸರಕಾರಗಳು ಕಾಳಜಿ ವಹಿಸುತ್ತಿವೆ. ಬ್ಯಾಂಕಿನ ವಾರ್ಷಿಕ ಒಟ್ಟು ಸಾಲದಲ್ಲಿ ಶೇ.18ರಷ್ಟು ಸಾಲವನ್ನು ಕೃಷಿಗೆ ನೀಡಲಾಗುತ್ತಿದೆ. ದೇಶದಲ್ಲಿ ಬ್ಯಾಂಕ್‌ಗಳು ನೀಡುವ ಒಟ್ಟು 11914 ಕೋಟಿ ರೂ. ಸಾಲದಲ್ಲಿ 1248ಕೋಟಿ ರೂ. ಸಾಲವನ್ನು ಕೃಷಿಗೆ ನೀಡ ಲಾಗುತ್ತಿದೆ ಎಂದು ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಭಾರತವು ಕೃಷಿ ಮಾರುಕಟ್ಟೆಯಲ್ಲಿ ಆರನೇ ಸ್ಥಾನದಲ್ಲಿದೆ. 2019-20ನೆ ಸಾಲಿನಲ್ಲಿ ಭಾರತ ಸರಕಾರ 291 ಮಿಲಿಯನ್ ಟನ್ ಆಹಾರ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಅದಕ್ಕಾಗಿ 92.60ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ತಾರೀಫ್ ಬೆಳೆಯನ್ನು ಬೆಳೆಸಲಿದೆ. ಅದೇ ರೀತಿ ಕೃಷಿ ಉತ್ಪನ್ನಗಳ ರಫ್ತಿನಲ್ಲಿಯೂ ದೇಶ ಸಾಕಷ್ಟು ಮುಂದಿದೆ. ಕೃಷಿ ಅಭಿವೃದ್ಧಿಗೆ ವಿದೇಶಿ ಬಂಡವಾಳ ಅತಿ ಅಗತ್ಯವಾಗಿದ್ದು, ಕಳೆದ 10ವರ್ಷಗಳಲ್ಲಿ 9.41ಮಿಲಿಯನ್ ಯುಎಸ್ ಡಾಲರ್ ಬಂಡವಾಳವು ದೇಶಕ್ಕೆ ಹರಿದುಬಂದಿದೆ ಎಂದರು.

ರೈತ ಈ ದೇಶದ ಸ್ವಾಭಿಮಾನದ ಸಂಕೇತ. ಕೃಷಿ ಪ್ರಧಾನ ವಾಗಿರುವ ಭಾರತದಲ್ಲಿ ಶೇ.58ರಷ್ಟು ಮಂದಿ ಕೃಷಿಯನ್ನು ಅವಲಂಬಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಇಂದಿನ ಯುವ ಜನಾಂಗ ಕೃಷಿಯಿಂದ ದೂರ ಸರಿಯುತ್ತಿದೆ. ಕೃಷಿಗೆ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ ಎಂಬುದನ್ನು ಅರ್ಥ ಮಾಡಿಕೊಂಡು ಅದರಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮಾ ಬಂಟಕಲ್ಲು ವಹಿಸಿ ದ್ದರು. ರೋಟರಿ ಜಿಲ್ಲೆ ಟೀಚರ್ಸ್ ಸಪೋರ್ಟ್ ಅಧ್ಯಕ್ಷ ಮಂಜುನಾಥ ಉಪಾಧ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಕೃಷಿಕರಾದ ಪ್ರಸಾದ್ ಶೆಟ್ಟಿ ನಿಟ್ಟೂರು, ವೇಣುಗೋಪಾಲ ಎಂ.ಪಡುಕಳತ್ತೂರು, ಶಂಕರ ಕೋಟ್ಯಾನ್ ಪೆರಂಪಳ್ಳಿ, ರಘುಪತಿ ನಾಯ್ಕಿ ಕೆಳಾರ್ಕಳಬೆಟ್ಟು, ಡೊರಿನಾ ಡಯಾಸ್ ಬಂಟ ಕಲ್ಲು ಅವರನ್ನು ಸನ್ಮಾನಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ವರದಿ ವಾಚಿಸಿದರು. ಉಪಾಧ್ಯಕ್ಷ ಮಲ್ಲಂಪಳ್ಳಿ ಶ್ರೀನಿವಾಸ ಬಲ್ಲಾಳ್ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇಣುಗೋಪಾಲ ಎಂ. ವಂದಿಸಿದರು. ನಿರ್ಮಲ್ ಕುಮಾರ್, ರವೀಂದ್ರ ಪೂಾರಿ ಕಾರ್ಯಕ್ರಮ ನಿರೂಪಿಸಿದರು.

ಈ ಸಮಾವೇಶದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳು, ಕೃಷಿ ಸಲಕರಣೆ ಗಳು, ಕೃಷಿ ಸಂಬಂಧ ಪತ್ರಿಕೆಗಳು, ವಿವಿಧ ತಳಿಯ ಬೀಜ ಹಾಗೂ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News