ಹೂಡೆಯ ಸಾಲಿಹಾತ್ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ

Update: 2020-02-23 14:14 GMT

ಉಡುಪಿ, ಫೆ.23: ತೋನ್ಸೆ ಹೂಡೆಯ ಸಾಲಿಹಾತ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಏಳು ದಿನಗಳ ಕಾಲ ಹಮ್ಮಿಕೊಳ್ಳಲಾದ ವ್ಯಕ್ತಿತ್ವ ವಿಕಸನ ಶಿಬಿರವನ್ನು ಸಾಲಿಹಾತ್ ಶಿಕ್ಷಣ ಸಂಸ್ಥೆಯ ಖಜಾಂಚಿ ಹಾಗೂ ಸ್ಥಳೀಯ ಹೂಡೆಯ ಜಮಾಆತೇ ಇಸ್ಲಾಮಿ ಅಧ್ಯಕ್ಷ ಅಬ್ದುಲ್ ಖಾದಿರ್ ಇತ್ತೀಚೆಗೆ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿದ ಈ ವಿದ್ಯಾರ್ಥಿಗಳಿಗೆ ರಜಾ ಅವಧಿಯಲ್ಲಿ ಇಂತಹ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆಯುಳ್ಳವರನ್ನು ಪ್ರೋತ್ಸಾಹ ನೀಡಿ, ಅವರನ್ನು ಬೆಳೆಸಿದರೆ ಖಂಡಿತವಾಗಿ ಸಮಾಜಕ್ಕೆ ಉತ್ತಮ ಸಂಪನ್ಮೂಲ ವ್ಯಕಿತಿಗಳನು್ನ ನೀಡಲು ಸಾಧ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಟ್ರಸ್ಟ್‌ನ ಹಿರಿಯ ಸದಸ್ಯ ಮೌಲಾನಾ ಆದಂ, ಎಚ್‌ಆರ್‌ಎಸ್ ತರಬೇತುದಾರ ಅಮಿರುದ್ದಿನ್ ಕದ್ರೋಳಿ, ಮುನವರ್ ಮಂಗಳೂರು, ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಪಿ.ಯು. ಕಾಲೇಜು ಮುಖ್ಯಸ್ಥೆ ಶಬಾನಾ ಮುಮ್ತಾಝ್, ಜಿಐಓ ಹೂಡೆ ಘಟಕ ಅಧ್ಯಕ್ಷೆ ಅಲ್ಫಿಯ ಮುಂತಾದವರು ಉಪಸ್ಥಿತರಿದ್ದರು.

ಅರೇಬಿಕ್ ಕಾಲೇಜಿನ ಮುಖ್ಯಸ್ಥೆ ಕುಲ್ಸುಮ್ ಅಬೂಬಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಆಯೇಷಾ ವಸೀ ಪ್ರಾರ್ಥಿಸಿದರು. ವಿದ್ಯಾರ್ಥಿನಿ ನೌಶೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News