ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಅಮೇರಿಕ ಸಂಜಾತೆ ಕೆರೋಲಿನಾ ಟೆರೇಸ್ ಭೇಟಿ

Update: 2020-02-24 12:42 GMT

ಭಟ್ಕಳ: ಫಿಡೆಲಿಟಿ ಕಂಪೆನಿಯ ಅಮೇರಿಕ ಸಂಜಾತೆ ಕೆರೋಲಿನಾ ಟೆರೇಸ್, ಇಲ್ಲಿನ ಸಾಗರ ರಸ್ತೆಯ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಸಂಸ್ಥೆಯ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಸೋಮವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.

ಫಿಡೆಲಿಟಿ ನ್ಯಾಶನಲ್ ಫಿನಾನ್ಶಿಯಲ್ ಕಂಪೆನಿಯೊಂದಿಗಿನ ಒಡಂಬಡಿಕೆಯ ಫಲಶೃತಿಯಾಗಿ ಉದ್ಯೋಗ ಪಡೆದ ವಿದ್ಯಾರ್ಥಿಗಳೊಂದಿಗೆ ಈ ಸಂವಾದ ಕಾರ್ಯಕ್ರಮ ನಡೆಯಿತು. 

ಭಟ್ಕಳ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ. ಸುರೇಶ್ ವಿ ನಾಯಕ್ ಮಾತನಾಡಿ "ಭಾರತಕ್ಕೆ ಟ್ರಂಪ್ ಬಂದ ದಿನವೇ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿಗೆ ಫಿಡೆಲಿಟಿ ಕಂಪೆನಿಯ ಅಮೇರಿಕ ಸಂಜಾತೆ ಕೆರೋಲಿನಾ ಟೆರೇಸ್ ಭೇಟಿ ನೀಡಿದ್ದು ಬಹಳ ವಿಶೇಷ ಹಾಗೂ ಅವಿಸ್ಮರಣೀಯ ಘಳಿಗೆ ಎಂದು ಸ್ಮರಿಸಿದರು. 

ಎಫ್.ಎನ್.ಎಫ್ ಕಂಪೆನಿಯ ಹಿರಿಯ ಉಪಾಧ್ಯಕ್ಷೆ ಕೆರೋಲಿನಾ ಟೆರೇಸ್ ಮಾತನಾಡಿ ಈ ಕಾಲೇಜಿಗೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ, ಇಲ್ಲಿನ ವಿದ್ಯಾರ್ಥಿಗಳ ಕಲಿಯುವ ಹಂಬಲ ಉತ್ಕಟವಾದದ್ದು ಎಂದು ಶ್ಲಾಘಿಸಿದರು. ಈ ಭೇಟಿಯಿಂದ ಉತ್ತರ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶದ ಹೆಬ್ಬಾಗಿಲು ತೆರೆದಂತಾಗಿದೆ. ಕಾರಣ ನಮ್ಮ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಭೇಟಿ ನೀಡಿದ ಪ್ರಯುಕ್ತ ಜಿಲ್ಲೆ ಹಾಗೂ ಭಟ್ಕಳದ ಜನತೆಯ ಪರವಾಗಿ ಅಮೇರಿಕಾದಿಂದ ಆಗಮಿಸಿದ ಅತಿಥಿಯನ್ನು ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಫಿಡೆಲಿಟಿ ಅಧಿಕಾರಿಗಳಾದ ಸುಷ್ಮಾ ಬುಟಿಯಾ, ಜ್ಯೋತಿ ಕೆ., ತರಬೇತುದಾರ ಓಂಕಾರ್ ಮರಬಳ್ಳಿ, ಕಾಲೇಜಿನ ಉದ್ಯೋಗಾಧಿಕಾರಿ ವಿಘ್ನೇಶ್ ಪ್ರಭು ಉಪಸ್ಥಿತರಿದ್ದರು. ಪ್ರಾಂಶುಪಾಲ ಶ್ರೀನಾಥ್ ಪೈ ಪ್ರಾಸ್ಥಾವಿಕವಾಗಿ ಮಾತನಾಡಿದರು, ಕಾವ್ಯಶ್ರೀ ಉಪಾಧ್ಯಾಯ ಸ್ವಾಗತಿಸಿದರೆ, ಸೀಮಾ ನಾಯ್ಕ ವಂದಿಸಿದರು, ಉಪನ್ಯಾಸಕಿ ಉನ್ನತಿ ಬಡಾಲ್ ಹಾಗೂ ವಿದ್ಯಾರ್ಥಿನಿ ದಿವ್ಯಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News