ಮೋದಿ 'ದ್ವೇಷದ ಸಂಕೇತ'ವಾದರೆ, ಪ್ರತಿಭಟನೆಗಳು 'ಭರವಸೆಯ ಆಶಾಕಿರಣ': HBO ಕಾರ್ಯಕ್ರಮದಲ್ಲಿ ಜಾನ್ ಆಲಿವರ್

Update: 2020-02-24 13:54 GMT

ಹೊಸದಿಲ್ಲಿ: ಇಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಹ್ಮದಾಬಾದ್‍ನ ಮೊಟೇರಾ ಸ್ಟೇಡಿಯಂನಲ್ಲಿ ``ಪ್ರಧಾನಿ ಮೋದಿ ಭಾರತದ ಹೆಮ್ಮೆ'' ಎಂದು ಗುಣಗಾನ ಮಾಡಿದ್ದರೆ, ಅತ್ತ ಅಮೆರಿಕಾದಲ್ಲಿ ರವಿವಾರ ರಾತ್ರಿ ಎಚ್‍ ಬಿಒ ವಾಹಿನಿಯಲ್ಲಿ  ಪ್ರಸಾರವಾದ ಕಾಮಿಡಿಯನ್ ಜಾನ್ ಆಲಿವರ್ ಅವರು ತಮ್ಮ 'ಲಾಸ್ಟ್ ವೀಕ್ ಟುನೈಟ್ ವಿದ್ ಜಾನ್ ಆಲಿವರ್' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆಡಳಿತ `ನಿಜವಾಗಿಯೂ ಅಪಾಯಕಾರಿ' ಎಂದು ಹೇಳಿದ್ದಾರಲ್ಲದೆ, ಪ್ರಧಾನಿ ಮೋದಿಯ ವರ್ಚಸ್ಸು 'ದ್ವೇಷದ ತಾತ್ಕಾಲಿಕ ಸಂಕೇತವಾಗಿದೆ' ಎಂದರು.

ಸಿಎಎ-ಎನ್‍ಆರ್‍ಸಿ ವಿವಾದ, ದೇಶವ್ಯಾಪಿ ಪ್ರತಿಭಟನೆಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಯ ಕುರಿತಂತೆಯೂ ಮಾತನಾಡಿದ ಅವರು, "ಸಿಎಎ-ಎನ್‍ಆರ್‍ ಸಿ ಕೋಟ್ಯಂತರ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವ ಅತ್ಯಂತ ಚಾಣಾಕ್ಷ ಎರಡು ಹಂತದ ಕ್ರಮವಾಗಿದೆ" ಎಂದರಲ್ಲದೆ, "ಸಿಎಎ ಎನ್‍ಆರ್‍ಸಿ ವಿರುದ್ಧದ ಪ್ರತಿಭಟನೆಗಳು  ಭರವಸೆಯ ಆಶಾಕಿರಣವಾಗಿದೆ'' ಎಂದರು.

"ಮೋದಿ ಅಧಿಕಾರಕ್ಕೆ ಬಂದಂದಿನಿಂದ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿವೆ, ಈ ಹಾದಿಯಲ್ಲಿ ಭಾರತ ಸಾಗುತ್ತಿರುವುದು ನೋಡಿದಾಗ ದುಃಖವಾಗುತ್ತದೆ'' ಎಂದರು.

"ಮೋದಿ ಒಬ್ಬ ವಿವಾದಾತ್ಮಕ ವ್ಯಕ್ತಿತ್ವ. ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ  ಮೇಲೆ ನಡೆಯುತ್ತಿರುವ ದೌರ್ಜನ್ಯ  ಅಧಿಕವಾಗುತ್ತಿದ್ದು, ದೌರ್ಜನ್ಯ ಅದೆಷ್ಟು ಹೆಚ್ಚಾಗಿದೆಯೆಂದರೆ ಕಳೆದೆರಡು ತಿಂಗಳುಗಳಿಂದ ಭಾರತೀಯರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ" ಎಂದು ಆಲಿವರ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News