ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

Update: 2020-02-24 16:41 GMT

ಮಂಗಳೂರು, ಫೆ.24: ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ಕೃಷಿಕ, ಜಾನಪದ ಕ್ರೀಡೆಯಾದ ಕಂಬಳವನ್ನು ಸಂಘಟಿಸಿದ, ಪಜೀರ್ ಗ್ರಾಪಂ ಅಧ್ಯಕ್ಷರಾಗಿ 15 ವರ್ಷ ಕಾರ್ಯನಿರ್ವಹಿಸಿದ ವೆಂಕಪ್ಪ ಕಾಜವ ಅವರನ್ನು ಪಾನೇಲ ಸಂಗಮ್ ಗೇಮ್ಸ್ ಟೀಮ್ ಕ್ಲಬ್ ವತಿಯಿಂದ ಪಾನೇಲ ಶಾಂತಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

 ಉದ್ಯಮಿ ಪ್ರವೀಣ್ ಆಳ್ವ ಮಯ್ಯಲ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಂಟ್ವಾಳ ತಾಪಂ ಮಾಜಿ ಉಪಾಧ್ಯಕ್ಷ ಉಮ್ಮರ್ ಪಜೀರ್, ತಾಪಂ ಸದಸ್ಯ ಬಿ.ಕೆ. ಅಬ್ದುಲ್ ಜಬ್ಬಾರ್, ಪಜೀರ್ ಗ್ರಾಪಂ ಸದಸ್ಯರಾದ ಮುಹಮ್ಮದ್ ಕೆ.ಎಂ., ಶಾಫಿ ಪಾನೇಲ, ರಾಕೇಶ್ ಶೆಟ್ಟಿ, ಮಾಜಿ ಸದಸ್ಯ ಅಬ್ದುಲ್ ಖಾದರ್ ಬಾಕಿಮಾರ್, ಉದ್ಯಮಿ ಶರತ್ ಕಾಜವ, ಸುಂದರ್ ಶೆಟ್ಟಿ, ಬದ್ರುದ್ದೀನ್, ಪಾರೀಸ್ ಪಾನೇಲ, ಅನ್ಸಾರ್ ಪಾನೇಲ, ಅಬ್ದುಲ್ ಖಾದರ್ ಗರಡಿ, ಬಶೀರ್ ಎ.ಕೆ.ಜೆ., ಪಾನೇಲ ಗಣೇಶ ಯುವಕ ಮಂಡಳಿಯ ಅಧ್ಯಕ್ಷ ಜಗದೀಶ್ ಕೋಟ್ಯಾನ್, ಸಂಗಮ್ ಗೇಮ್ಸ್ ಟೀಮ್ ಅಧ್ಯಕ್ಷ ಲತೀಫ್ ಬಾಕಿಮಾರ್, ಉಪಾಧ್ಯಕ್ಷ ಅಶ್ರಫ್ ಪಾನೇಲ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಬೋಳಿಯಾರ್ ಗ್ರಾಪಂ ಸದಸ್ಯ ಅಬ್ದುಲ್ ಶುಕೂರ್, ಕಬಡ್ಡಿ ಕ್ರೀಡಾಪಟು ವಿಖ್ಯಾತ್ ಕಾಜವ, ಮದ್ಯನಡ್ಕ ಇಸ್ಮಾಯಿಲ್ ಹಾಜಿ, ಸುರೇಶ್ ಕಯ್ಯಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ಪಾನೇಲ ಸಂಗಮ್ ಗೇಮ್ಸ್ ಟೀಮ್ ಕ್ಲಬ್ನ ಮಾಜಿ ಅಧ್ಯಕ್ಷ ಹೆರಾಲ್ಡ್ ಕ್ರಾಸ್ತಾ ಅವರನ್ನು ಅಭಿನಂದಿಸಲಾಯಿತು.

ಬಶೀರ್ ಕಾರ್ಯಕ್ರಮ ನಿರೂಪಿಸಿದರು. ಪಾನೇಲ ಬಸ್ ಹೋರಾಟ ಸಮಿತಿಯ ಅಧ್ಯಕ್ಷ ಯೂಸುಫ್ ಪಾನೇಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News