ಫೆ.29ರಿಂದ ರೋಟರ್ಯಾಕ್ಟ್ ಸಂಸ್ಥೆಗಳ ಜಿಲ್ಲಾ ವಾರ್ಷಿಕ ಸಮಾವೇಶ

Update: 2020-02-24 16:46 GMT

ಮಂಗಳೂರು : ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ರೋಟರ್ಯಾಕ್ಟ್ ಸಂಸ್ಥೆಗಳ ಜಿಲ್ಲಾ 3181ರ 3ನೇ ವಾರ್ಷಿಕ ಸಮಾವೇಶ (ಸ್ನೇಹ ಸಂಚಯ) ಫೆ.29 ಮತ್ತು ಮಾ.1 ರಂದು ನಗರದ ಆಫೀಸರ್ಸ್‌ ಕ್ಲಬ್ ಸಭಾಂಗಣದಲ್ಲಿ ಜರುಗಲಿದೆ.

ಅಂತಾರಾಷ್ಟ್ರೀಯ ರೋಟರಿ ಜಿಲ್ಲಾ 3181ರ ಗವರ್ನರ್ ಮೈಸೂರು ಮೂಲದ ರೋ ಜೋಸೆಫ್ ಮಾಥ್ಯು ಫೆ.29ರ ಪೂ.11ಗಂಟೆಗೆ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಸಹಾಯಕ ಗವರ್ನರ್ ರೋ. ಗೀತಾನಂದ ಪೈ, ಜಿಲ್ಲಾ ರೋಟರ್ಯಾಕ್ಟ್ ಸಮಿತಿಯ ಅಧ್ಯಕ್ಷ ರೊ. ಯತೀಶ್ ಬೈಕಂಪಾಡಿ, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ರೋ.ಡಾ. ಜಯ ಪ್ರಕಾಶ್ ಪೂಂಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಮಾ.1ರಂದು ಸಮಾರೋಪ ಸಮಾರಂಭ ಜರುಗಲಿದೆ. ಈ ಸಂದರ್ಭ ವಿವಿಧ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ವಿವರಗಳಿಗೆ ಮೊ.ಸಂ: 98450 81145ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News