ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಸುಹಾಸ್‍ಗೆ ಬೆಳ್ಳಿಪದಕ

Update: 2020-02-24 16:51 GMT

ಪುತ್ತೂರು: ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಪ್ರಥಮ ಅಂತರ್ ವಿಶ್ವವಿದ್ಯಾನಿಲಯ `ಖೇಲೋ ಇಂಡಿಯಾ'  ರಾಷ್ಟ್ರೀಯ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಕೂಟದ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ಸುಹಾಸ್ ಪಿ.ಎಂ. 400 ಮೀ ಮತ್ತು 400 ಮೀ ಫ್ರೀಸ್ಟೈಲ್ , 200 ಮೀ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕದ ಪಡೆದುಕೊಂಡಿದ್ದಾರೆ.

ಕಳೆದ ನವೆಂಬರ್ ತಿಂಗಳಲ್ಲಿ ಪಂಜಾಬಿನಲ್ಲಿ ನಡೆದಿದ್ದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಈಜು ಸ್ಪರ್ಧೆಯಲ್ಲಿ ಸುಹಾಸ್ ಅವರು ತೋರಿದ ಸಾಧನೆಯನ್ನು ಪರಿಗಣಿಸಿ ಈ ಕ್ರೀಡಾ ಕೂಟಕ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಸುಹಾಸ್ ಅವರು ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನ ಈಜು ಕೊಳದ ಅಕ್ವೆಟಿಕ್ ಕ್ಲಬ್ ನ ಈಜುಪಟುವಾಗಿದ್ದಾರೆ. ಬಾಲವನ ಸ್ವಿಮ್ಮಿಂಗ್ ಕ್ಲಬ್ ನ ತರಬೇತಿದಾರರಾದ ಪಾರ್ಥ ವಾರಣಾಸಿ, ನಿರೂಪ್, ರೋಹಿತ್ ಮತ್ತು ಯಜ್ಞೇಶ್ ಅವರ ಬಳಿ ತರಬೇತಿ ಪಡೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News