ಜನಾಂಗೀಯ ನಿಂದನೆಗೊಳಗಾದ ಚೀನಿ ಸ್ನೇಹಿತೆಯ ರಕ್ಷಣೆಗೆ ಧಾವಿಸಿದ ಭಾರತೀಯ ಮಹಿಳೆಯ ಮೇಲೆ ಹಲ್ಲೆ

Update: 2020-02-24 16:51 GMT

ಲಂಡನ್,ಫೆ.24: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜನಾಂಗೀಯ ನಿಂದನೆ ಹಾಗೂ ಹಲ್ಲೆಗೊಳಗಾದ ತನ್ನ ಚೀನಿ ಸ್ನೇಹಿತೆಯನ್ನು ರಕ್ಷಿಸಲು ಯತ್ನಿಸಿದ ಭಾರತೀಯ ಮೂಲದ ಮಹಿಳಾ ನ್ಯಾಯವಾದಿಯೊಬ್ಬರು ಅಪರಿಚಿತ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿ ಪ್ರಜ್ಞಾಹೀನರಾದ ಘಟನೆ ಬ್ರಿಟನ್‌ನ ಸೊಲಿಹ್ಯೂಲ್ ನಗರದಲ್ಲಿ ಸೋಮವಾರ ವರದಿಯಾಗಿದೆ.

29 ವರ್ಷ ವಯಸ್ಸಿನ ಮೀರಾ ಸೋಲಂಕಾ ಅವರು ತನ್ನ ಚೀನಿ ಸ್ನೇಹಿತೆ ಮ್ಯಾಂಡಿ ಹುವಾಂಗ್ ಸೇರಿದಂತೆ ಮಿತ್ರರೊಂದಿಗೆ ಪಾನಗೃಹವೊಂದರಲ್ಲಿ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಆಗ ಅಲ್ಲಿಗೆ ಆಗಮಿಸಿದ್ದ ಕೆಲವು ಏಶ್ಯ ಮೂಲದ ವ್ಯಕ್ತಿಗಳು, ಮೀರಾ ಅವರ ಚೀನಿ ಸ್ನೇಹಿತೆಯನ್ನು ಅವಾಚ್ಯವಾಗಿ ನಿಂದಿಸಿದರು. ‘‘ ನಿನ್ನ.... ಕರೋನವೈರಸ್ ಸ್ನೇಹಿತೆಯನ್ನು ಆಕೆಯ ದೇಶಕ್ಕೆ ವಾಪಸ್ ಕಳುಹಿಸಿ’’ ಎಂದು ಬೈಗುಳಗಳ ಸುರಿಮಳೆಗೈದರು. ಆಗ ಆಕೆಯ ರಕ್ಷಣೆಗೆ ಧಾವಿಸಿದ ಮೀರಾ ಅವರು ಬಯ್ಯುವುದನ್ನು ನಿಲ್ಲಿಸಿ ಎಂದು ಆಕ್ರೋಶದಿಂದ ಕೂಗಿದರು. ಆಗ ಅವರಲ್ಲೊಬ್ಬಾತ ಆಕೆಯನ್ನು ದೂಡಿದ್ದರಿಂದ ಅವರು ನೆಲಕ್ಕೆ ಬಿದ್ದು ಪ್ರಜ್ಞಾಹೀನರಾದರು ಎಂದು ಸಂಡೇ ಮರ್ಕ್ಯುರಿ ಸುದ್ದಿಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News