ಆಡಿನ ಮೇಲೆ ಚಿರತೆ ದಾಳಿ: ಸ್ಥಳೀಯರಲ್ಲಿ ಆತಂಕ

Update: 2020-02-24 17:20 GMT

ಪಡುಬಿದ್ರಿ: ಮೇಯುತಿದ್ದ ಎರಡು ಆಡುಗಳನ್ನು ಚಿರತೆ ತಿಂದುಹೋದ ಘಟನೆ ಸೋಮವಾರ ಸಲಿಮಾರು ಗ್ರಾಮ ಪಂ. ವ್ಯಾಪ್ತಿಯ ಅಡ್ವೆಯ ಕೋಚ ಬಾಳಿಕೆ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಝೈನಾಬಿ ಎಂಬವರು ಸಾಕಿದ ಹೆಣ್ಣು ಮತ್ತು ಗಂಡು ಆಡುಗಳನ್ನು ಮನೆ ಸಮೀಪ ಮೇಯಲು ಬಿಟ್ಟಿದ್ದರು. ಸಂಜೆ ಆಡುಗಳನ್ನು ಹಟ್ಟಿಗೆ ಕೊಂಡೊಯ್ಯಲು ಬಂದಾಗ ಆಡುಗಳನ್ನು ತಿಂದಿರುವುದು ಬೆಳಕಿಗೆ ಬಂತು. ಇದರಿಂದ ಸ್ಥಳೀಯರು ಆತಂಕಿರಾಗಿದ್ದು, ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಎರಡು ಆಡುಗಳನ್ನು ಖರೀದಿಸಿ ಸಾಕುತಿದ್ದೆ. ಈಗ ಆಡಿಗೆ 1.2 ತಿಂಗಳಾಗಿತ್ತು. ಸಾಕಿದ ಆಡುಗಳು ಇಲ್ಲವಾಯಿತು. ಆಡಿನ ಮೇಲೆ ದಾಳಿ ನಡೆಸಿರುವುದು ನಮಗೆ ತಿಳಿಯಲೇ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಚಿರತೆಗಳು ಇರುವ ಬಗ್ಗೆ ಮೂರು ತಿಂಗಳ ಹಿಂದೆಯೇ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ದೂರಿನಂತೆ ಅರಣ್ಯ ಇಲಾಖೆಯವರು ಫಲಿಮಾರು ಪರಿಸರದಲ್ಲಿ ಬೋನುಗಳನ್ನು ಇಡಲಾಗಿತ್ತು. ಆದರೆ ಏನೂ ಪ್ರಯೋಜನವಾಗಲಿಲ್ಲ. ಸ್ಥಳೀಯರು ಚಿರತೆಯನ್ನು ಕಣ್ಣಾರೆ ಕಂಡಿದ್ದಾರೆ. ಕೆಲವು ನಾಯಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕಿದೆ. ಝೈನಾಬಿ ಅವರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ತಾಲ್ಲೂಕು ಪಂ. ಸದಸ್ಯ ದಿನೇಶ್ ಫಲಿಮಾರು ಒತ್ತಾಯಿಸಿದ್ದಾರೆ.

ಮಂಗಳವಾರ ಬೋನು ಇಡಲಾಗುವುದು: ಸಾಕು ಆಡನ್ನು ಕಾಡು ಪ್ರಾಣಿ ತಿಂದ ಬಗ್ಗೆ ಸಂಶಯವಿದೆ. ಚಿರತೆ ಇರಬಹುದು ಎಂಬ ಸ್ಥಳೀಯರ ದೂರಿದ್ದಾರೆ. ಅದರಂತೆ ಚಿರತೆಗಾಗಿ ಬೋನು ಇಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿ ಅಭಿಲಾಷ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News