ಕೈಕಂಬ: ರಕ್ತದಾನ, ಉಚಿತ ನೇತ್ರ ತಪಾಸಣಾ ಶಿಬಿರ

Update: 2020-02-24 17:46 GMT

ಗುರುಪುರ : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ಕೈಕಂಬ ರೇಂಜ್ ಇದರ ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರವು ರವಿವಾರ ಗುರುಪುರ ಕೈಕಂಬದಲ್ಲಿ  ನಡೆಯಿತು.

ಎಸ್.ಜೆ.ಎಮ್ ಕೈಕಂಬ ರೇಂಜ್ ಗುರುಪುರ ಇದರ ಅಧ್ಯಕ್ಷ ಖಾಸಿಂ ಮದನಿ ಮಲ್ಲೂರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ನಂಡೂ ಪೆಂಙಲ್ ಇದರ ದ.ಕ ಜಿಲ್ಲಾಧ್ಯಕ್ಷ ಎ ಎಚ್ ನೌಷದ್ ಹಾಜಿ ಸುರಲ್ಪಾಡಿ ಅಧ್ಯಕ್ಷತೆಯಲ್ಲಿ  ಜಿಲ್ಲಾ ಪಂಚಾಯತ್ ಸದಸ್ಯ ಯುಪಿ ಇಬ್ರಾಹಿಂ ಉದ್ಘಾಟಿಸಿದರು.

ವೇದಿಕೆಯಲ್ಲಿ ಮುಸ್ತಫಾ ಅಡ್ಡೂರು  ದೆಮ್ಮಲೆ (ಸಲಹೆಗಾರರು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ,ಅಬ್ದುಲ್ ರಝಾಕ್ ಮದನಿ ಕಂದಾವರ, ಆಬಿದ್ ಸಹದಿ ಬಂಗಳಗುಡ್ಡೆ, ಆರ್.ಎಸ್ ಝಕಿರ್ ಸೂರಲ್ಪಾಡಿ (ಉಪಾಧ್ಯಕ್ಷರು, ಗಂಜಿಮಠ ಪಂ.), ಅಬ್ದುರ್ರಹ್ಮಾನ್ ಮೂನ್ ಲೈಟ್ (ಉದ್ಯಮಿ, ಕಂದಾವರ), ನಾಸೀರ್ ಬಾಮಿ, ಆಸಿಫ್ ಹಾಜಿ ಆದರ್ಶ್(ಸಂಚಾಲಕರು,ಆದರ್ಶ್ ಆಂಗ್ಲ ಮಾಧ್ಯಮ ಶಾಲೆ ತೋಡಾರು), ಹಾಜಿ ಎಂ.ಎಚ್ ಮಯ್ಯದ್ದಿ (ಉದ್ಯಮಿ ಅಡ್ಡೂರು), ಮೊಹಮ್ಮದ್ ಉಂಜ್ಞಿ (ಮಾಜಿ ಕೆಡಿಪಿ ಸದಸ್ಯರು ಮಂಗಳೂರು ತಾಲೂಕು), ಎಂ.ಜಿ ಕಬೀರ್ ಮುಲ್ಲರಪಟ್ನ, ಜಿ.ಎಂ ಇಮ್ತಿಯಾಝ್ ಗಂಜಿಮಠ, ಅಬ್ದುಲ್ ಅಝೀಝ ಬಂಗುಳಗುಡ್ಡೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಂಡೊ ಪೆಂಙಲ್ ಇದರ ದ.ಕ ಜಿಲ್ಲಾಧ್ಯಕ್ಷರಾದ ಎ ಎಚ್ ನೌಷದ್ ಹಾಜಿ ಸುರಲ್ಪಾಡಿ ಅವರನ್ನು  ಸನ್ಮಾನಿಸಲಾಯಿತು.

ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಒಟ್ಟು 185 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದರು. 45 ಮಂದಿಗೆ ಉಚಿತ ಕನ್ನಡಕ ನೀಡುವ ವ್ಯವಸ್ಥೆಯನ್ನು ಸಂಘಟಕರು ಆಯೋಜಿಸಲಿದ್ದಾರೆ.

ಎಸ್. ಜೆ .ಎಂ ಕೈಕಂಬ ರೇಂಜ್  ಪ್ರಧಾನ ಕಾರ್ಯದರ್ಶಿ ಕೆ. ಎಚ್. ಯು ಶಾಫಿ ಮದನಿ ಕರಾಯ ಸ್ವಾಗತಿಸಿದರೆ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಕಾರ್ಯ ನಿರ್ವಾಹಕ ಅಶ್ರಫ್ ಅರಬಿ ಕಲ್ಲಡ್ಕ ನಿರೂಪಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News