ಈಜಿಪ್ಟ್ ನ ಮಾಜಿ ಅಧ್ಯಕ್ಷ ಹೊಸ್ನಿ ಮುಬಾರಕ್ ನಿಧನ

Update: 2020-02-25 14:07 GMT

ಹೊಸದಿಲ್ಲಿ: ಈಜಿಪ್ಟ್ ನ ಮಾಜಿ ಅಧ್ಯಕ್ಷ ಹೊಸ್ನಿ ಮುಬಾರಕ್ ತಮ್ಮ 91ನೆ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 2011ರಲ್ಲಿ ಈಜಿಪ್ಟ್ ನಲ್ಲಿ ಮಿಲಿಟರಿ ಕ್ರಾಂತಿ ನಡೆಯುವವರೆಗೆ ಅವರು 3 ದಶಕಗಳ ಕಾಲ ಆಡಳಿತ ನಡೆಸಿದ್ದರು.

ಇತ್ತೀಚಿನ ಕೆಲ ದಿನಗಳಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಗಳು ತಿಳಿಸಿವೆ.

2011ರ ಅರಬ್ ಕ್ರಾಂತಿಯು ಹೊಸ್ನಿಯವರನ್ನು ಪದಚ್ಯುತಗೊಳಿಸಿತ್ತು. ಕೈರೋದ ತಹ್ರಿರ್ ಸ್ಕ್ವೇರ್ ಮತ್ತು ಇತರ ಕಡೆಗಳಲ್ಲಿ ಸಾವಿರಾರು ಯುವಜನರು ಬೀದಿಗಿಳಿದು 18 ದಿನಗಳ ಕಾಲ ನಡೆಸಿದ ಭಾರೀ ಪ್ರತಿಭಟನೆ ಅವರನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತ್ತು.

ಟ್ಯುನಿಷಿಯಾದ ಬಂಡಾಯದಿಂದ ಸ್ಫೂರ್ತಿ ಪಡೆದಿದ್ದ ಈಜಿಪ್ಟ್‌ನ ಯುವಜನರು ಅರಬ್ ಕ್ರಾಂತಿಯನ್ನು ಯಶಸ್ವಿಗೊಳಿಸಲು ಸಾಮಾಜಿಕ ಜಾಲತಾಣಗಳು ವ್ಯಾಪಕವಾಗಿ ನೆರವಾಗಿದ್ದವು. ಹೊಸ್ನಿಯವರ ಆಡಳಿತದಲ್ಲಿಯ ಭ್ರಷ್ಟಾಚಾರ ಮತ್ತು ಕ್ರೌರ್ಯದ ವಿರುದ್ಧ ಅದುಮಿಡಲಾಗಿದ್ದ ಆಕ್ರೋಶ ಹೊಳೆಯಾಗಿ ಹರಿದಿತ್ತು. ಸುದೀರ್ಘ ಕಾಲದಿಂದ ಹೊಸ್ನಿಯವರ ಬೆನ್ನಿಗೆ ನಿಂತಿದ್ದ ಸೇನೆಯು ಕೊನೆಗೂ 2011,ಫೆ.11ರಂದು ಅವರನ್ನು ಹುದ್ದೆಯಿಂದ ಕೆಳಗಿಳಿಸಿ ತಾನು ಅಧಿಕಾರ ವಹಿಸಿಕೊಂಡಿತ್ತು.

ಟ್ಯುನಿಷಿಯಾದ ಅಧ್ಯಕ್ಷರು ಮೊದಲೇ ಪದಚ್ಯುತಗೊಂಡಿದ್ದರಾದರೂ,ಅರಬ್ ಕ್ರಾಂತಿಯಿಂದಾಗಿ ಹೊಸ್ನಿಯವರ ಅಧಿಕಾರ ಕಳೆದಕೊಳ್ಳುವಂತಾಗಿದ್ದು ಅರಬ್ ಜಗತ್ತಿನಲ್ಲಿಯ ಇತರ ಆಳ್ವಿಕೆಗಳು ತಲ್ಲಣಗೊಳ್ಳುವಂತೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News