ಫೆ.29ರಿಂದ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ

Update: 2020-02-25 13:52 GMT

ಉಡುಪಿ, ಫೆ.25: ಜಿಲ್ಲಾಡಳಿತ, ಜಿಪಂ, ಜಿಲ್ಲಾ ತೋಟಗಾರಿಕೆ ಇಲಾಖೆ, ಉಡುಪಿ ಜಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಉಡುಪಿ ಜಿಲ್ಲಾ ಮಟ್ಟದ ಫಲಪುಷ್ಪಪ್ರದರ್ಶನ ಫೆ.29ರಿಂದ ಮಾ.2ರವರೆಗೆ ಉಡುಪಿ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ(ರೈತ ಸೇವಾ ಕೇಂದ್ರ) ಆವರಣದಲ್ಲಿ ನಡೆಯಲಿದೆ.

ಪುಷ್ಪ ರಂಗೋಲಿ ಸ್ಪರ್ಧೆ:  ಇದರ ಅಂಗವಾಗಿ ಪುಷ್ಪ ರಂಗೋಲಿ ರಚನಾ ಸ್ಪರ್ಧೆಯನ್ನು ಮಾ.1ರಂದು ಬೆಳಗ್ಗೆ 10ಗಂಟೆಯಿಂದ ಅಪರಾಹ್ನ 1:30ರವರೆಗೆ ಉಡುಪಿ ನಗರದವರಿಗಾಗಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಎಭಾಗವಹಿಸಲು ಆಸಕ್ತ ಸಾರ್ವಜನಿ ಕರು ತಮ್ಮ ಹೆಸರುಗಳನ್ನು ಫೆ.28ರೊಳಗೆ ಸಹಾಯಕ ತೋಟಗಾರಿಕಾ ನಿರ್ದೇಶಕರು, ಪುಷ್ಪ ಹರಾಜು ಕೇಂದ್ರ, ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಆವರಣ ಇವರಲ್ಲಿ ನೊಂದಾಯಿಸಿಕೊಳ್ಳಬಹುದು.

ಇದರಅಂಗವಾಗಿಪುಷ್ಪರಂಗೋಲಿರಚನಾರ್ಸ್ಪೆಯನ್ನು ಮಾ.1ರಂದು ಬೆಳಗ್ಗೆ 10ಗಂಟೆಯಿಂದ ಅಪರಾಹ್ನ 1:30ರವರೆಗೆ ಉಡುಪಿ ನಗರದವರಿಗಾಗಿ ಆಯೋಜಿಸಲಾಗಿದೆ. ರ್ಸ್ಪೆಯಲ್ಲಿಎಾಗವಹಿಸಲು ಆಸಕ್ತ ಸಾರ್ವಜನಿಕರು ತಮ್ಮ ಹೆಸರುಗಳನ್ನು ಫೆ.28ರೊಳಗೆ ಸಹಾಯಕ ತೋಟಗಾರಿಕಾ ನಿರ್ದೇಶಕರು, ಪುಷ್ಪ ಹರಾಜು ಕೇಂದ್ರ, ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಆವರಣ ಇವರಲ್ಲಿ ನೊಂದಾಯಿಸಿಕೊಳ್ಳಬಹುದು. ಕಾರ್ಯಕ್ರಮವನ್ನು ಫೆ.29ರ ಸಂಜೆ 4:30ಕ್ಕೆ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಉಡುಪಿ ಶಾಸಕ ಕೆ.ರಘುಪತಿ ಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ತೋಟಗಾರಿಕೆ, ರೇಷ್ಮೆ ಹಾಗೂ ಪೌರಾಡಳಿತ ಇಲಾಖೆ ಸಚಿವ ಕೆ.ಸಿ. ನಾರಾಯಣ ಗೌಡ ಉಪಸ್ಥಿತರಿರುವರು ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News