ಎರೆಗೊಬ್ಬರದಲ್ಲಿ ದುಪ್ಪಟ್ಟು ಪೋಷಕಾಂಶ: ಡಾ.ಸುಧೀರ್ ಕಾಮತ್

Update: 2020-02-25 13:55 GMT

ಉಡುಪಿ, ಫೆ.25: ಎರೆಗೊಬ್ಬರ ಹಾಗೂ ಎರೆಜಲ ಉತ್ಪಾದನಾ ತಂತ್ರಜ್ಞಾನ ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಧೀರ ಕಾಮತ್ ತಿಳಿಸಿದ್ದಾರೆ.

ಸೋಮವಾರ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಎರೆಗೊಬ್ಬರ ಹಾಗೂ ಎರೆಜಲ ಉತ್ಪಾದನಾ ತಂತ್ರಜ್ಞಾನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮನೆಯಲ್ಲೇ ಇರುವ ಕೃಷಿ ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸುವ ಈ ಗೊಬ್ಬರ ಬಹಳ ಉಪಯುಕ್ತವಾದದ್ದು. ಎರಗೊಬ್ಬರ ದಲ್ಲಿ ಸಗಣಿ ಗೊಬ್ಬರಕ್ಕಿಂತ ದುಪ್ಪಟ್ಟು ಪೋಷಕಾಂಶ ಇರುತ್ತದೆ ಹಾಗೂ ಎರೆಗೊಬ್ಬರದಲ್ಲಿ ಯಥೆೀಚ್ಚವಾಗಿ ಜೀವಸತ್ವಗಳಿವೆ ಎಂದರು.

ಮನೆಯಲ್ಲೇ ಇರುವ ಕೃಷಿ ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸುವ ಈ ಗೊಬ್ಬರ ಬಹಳ ಉಪಯುಕ್ತವಾದದ್ದು. ಎರಗೊಬ್ಬರ ದಲ್ಲಿ ಸಗಣಿ ಗೊಬ್ಬರಕ್ಕಿಂತ ದುಪ್ಪಟ್ಟು ಪೋಷಕಾಂಶ ಇರುತ್ತದೆ ಹಾಗೂ ಎರೆಗೊಬ್ಬರದಲ್ಲಿ ಯಥೇಚ್ಚವಾಗಿ ಜೀವಸತ್ವಗಳಿವೆ ಎಂದರು. ಕರಾವಳಿ ಪ್ರದೇಶದಲ್ಲಿ ಸಾವಯವ ವಸ್ತುಗಳು ಬೇಕಾದಷ್ಟಿವೆ. ಆದ್ದರಿಂದ ಕರಾವಳಿ ಪ್ರದೇಶದಲ್ಲಿ ಎರೆಗೊಬ್ಬರ ಮಾಡು ವುದು ಬಹಳ ಸುಲಭ. ಮಣ್ಣಿಗೆ ಬೇಕಾದ ತೇವಾಂಶವನ್ನು ಒದಗಿಸಿ ಉತ್ತಮವಾದ ಪರಿಸರ ನಿರ್ಮಾಣ ಮಾಡುವಲ್ಲಿ ಎರೆಹುಳು ವಿನ ಪಾತ್ರ ಬಹಳ ಮುಖ್ಯವಾದ್ದು ಎಂದು ಡಾ.ಕಾಮತ್ ನುಡಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಚೈತನ್ಯ ಹೆಚ್. ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾವಯವ ಮಟ್ಟ ಮಣ್ಣಿನಲ್ಲಿ ಇಲ್ಲವಾದರೆ ಎಷ್ಟು ರಾಸಾಯನಿಕಗಳನ್ನು ಒದಗಿಸಿದರೂ ಪ್ರಯೋಜನವಿಲ್ಲ. ಮಣ್ಣಿಗೆ ಬೇಕಾದ ಭೌತಿಕ, ರಾಸಾ ಯನಿಕ ಹಾಗೂ ಜೈವಿಕ ಗುಣಗಳನ್ನು ನಮಗೆ ತಿಳಿಯದಂತೆ ಎರೆಹುಳುಗಳು ಮಣ್ಣಿಗೆ ಒದಗಿಸುತ್ತವೆ ಎಂದರು.

ಕೆವಿಕೆ ಬ್ರಹ್ಮಾವರದ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಎನ್.ಈ. ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿಜ್ಞಾನಿ ಡಾ. ಜಯ ಪ್ರಕಾಶ್ ಆರ್ (ಮಣ್ಣು ವಿಜ್ಞಾನ) ಕಾರ್ಯಕ್ರಮ ನಿರೂಪಿಸಿ, ಕೀಟಶಾಸ್ತ್ರ ವಿಜ್ಞಾನಿ ಡಾ. ಸಚಿನ್ ಯು.ಎಸ್. ವಂದಿಸಿದರು.

ಬ್ರಹ್ಮಾವರ ಕೆವಿಕೆಯ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಎನ್.ಈ. ನವೀನ್ ರೈತರಿಗೆ ಪ್ರಾತ್ಯಕ್ಷಿಕೆ ಮುಖಾಂತರ ಕೃಷಿ ತ್ಯಾಜ್ಯ ವಸ್ತುಗಳಿಂದ ಎರೆಗೊಬ್ಬರ ಹಾಗೂ ಎರೆಜಲ ಉತ್ಪಾದನಾ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಿದರು. ಸುಮಾರು 35 ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News