ಕಲಾವಿದರಿಗೆ ನಾಟಕವನ್ನೇ ಉದ್ಯೋಗವನ್ನಾಗಿಸುವುದು ಅಸಾಧ್ಯ: ಕೃಷ್ಣರಾಜ್

Update: 2020-02-25 16:19 GMT

ಉಡುಪಿ, ಫೆ.25: ಕಲಾವಿದನ ಮನಸ್ಸು ಜಾಗೃತಗೊಂಡಾಗ ಕಲೆ ವಿಸ್ತಾರ ಗೊಳ್ಳಲು ಸಾಧ್ಯವಾಗುತ್ತದೆ. ಕಲಾವಿದರು ಬಹಳ ಸ್ಥಿತಿವಂತರಾಗಿ ಇರದೆ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಆದುದರಿಂದ ಮುಂದೆ ಯುವ ಕಲಾವಿದರು ಉದ್ಯೋಗದೊಂದಿಗೆ ನಾಟಕ ಮಾಡಬೇಕೆ ಹೊರತು ನಾಟಕವನ್ನೇ ಉದ್ಯೋಗ ವನ್ನಾಗಿ ಮಾಡಿಕೊಳ್ಳಬಾರದು ಎಂದು ರಂಗ ಕಲಾವಿದ ಕೃಷ್ಣರಾಜ್ ವಡ ಭಾಂಡೇಶ್ವರ ಹೇಳಿದ್ದಾರೆ.

ಸುಮನಸಾ ಕೊಡವೂರು ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ, ಸಂಸ್ಕೃತಿ ನಿದೇರ್ಶನಾಲಯ ನವದೆಹಲಿ, ಉಡುಪಿ ನಗರಸಭೆ, ಪೇಜಾವರ ಮಠದ ಸಹಕಾರದೊಂದಿಗೆ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಆಯೋಜಿಸಲಾದ ರಂಗಹಬ್ಬ ಇದರ ಎರಡನೆ ದಿನದ ಕಾರ್ಯಕ್ರಮದಲ್ಲಿ ರಂಗ ಗೌರವವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಗಳಾಗಿ ಸುಕನ್ಯಾ ಮಾರ್ಟಿಸ್, ಉದ್ಯಮಿ ಉದಯ ಕುಮಾರ್, ಸಂದೀಪ್ ಶೆಟ್ಟಿ, ಮಂಜುನಾಥ್ ಮಣಿಪಾಲ, ಕೆ.ಟಿ.ಪ್ರಸಾದ್ ರವೀಂದ್ರ ಪೂಜಾರಿ ಉಪಸ್ಥಿತರಿದ್ದರು. ಉಡುಪಿ ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಸಲಹೆಗಾರ ಸುರೇಶ್ ಕುರ್ಕಾಲ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಗಣೇಶ್ ರಾವ್ ಎಲ್ಲೂರು ಸ್ವಾಗತಿಸಿದರು. ಜೊತೆ ಕೋಶಾಧಿಕಾರಿ ನಾಗೇಶ್ ಪ್ರಸಾದ್ ವಂದಿಸಿದರು. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸುಮನಸಾ ತಂಡದಿಂದ ಪತ್ರಕರ್ತ ಬಾಲಕೃಷ್ಣ ಶಿಬಾರ್ಲ ರಚಿಸಿದ ‘ಕಾಪ’ ತುಳು ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News