ಬೋಟಿನಲ್ಲೇ ಕುಸಿದು ಬಿದ್ದು ಮೃತ್ಯು

Update: 2020-02-25 16:21 GMT

ಮಲ್ಪೆ, ಫೆ.25: ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರ ರೊಬ್ಬರು ಬೋಟಿನೊಳಗೆ ಕುಸಿದು ಬಿದ್ದು ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ವೇಳೆ ನಡೆದಿದೆ.

ಮೃತರನ್ನು ಯಶವಂತ್(55) ಎಂದು ಗುರುತಿಸಲಾಗಿದೆ.

ಇವರು ಇತರ ಮೀನುಗಾರರೊಂದಿಗೆ ಜಲಶಾಂತಿ ಎಂಬ ಮೀನುಗಾರಿಕಾ ಬೋಟಿನಲ್ಲಿ ಬೆಳಗ್ಗೆ ಮಲ್ಪೆ ಬಂದರಿನಿಂದ ಮೀನುಗಾರಿ ಕೆಗೆ ತೆರಳಿದ್ದು, ಬಂದರಿನಿಂದ 6 ಮಾರು ದೂರದಲ್ಲಿ ಮೀನುಗಾರಿಕೆ ಮಾಡುತ್ತ ಬಲೆ ಎಳೆಯುತ್ತಿದ್ದ ಇವರು, ಒಮ್ಮೆಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News