ಅಂತರ್ ಕಾಲೇಜು ಭಾಷಣ ಸ್ಪರ್ಧೆ: ಪಿಪಿಸಿ ಸಂಧ್ಯಾ ಕಾಲೇಜಿನ ವೆಂಕಟೇಶಪ್ರಸಾದ್ ಪ್ರಥಮ

Update: 2020-02-25 16:51 GMT

ಕಲ್ಯಾಣಪುರ, ಫೆ.25: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಆಶ್ರಯದಲ್ಲಿ ದಿ. ಮೊ.ಡಿ.ಜೆ. ಡಿಸೋಜಾ ಸ್ಮಾರಕ ಅಂತರ್ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವೆಂಕಟೇಶ್‌ ಪ್ರಸಾದ್ ಆರ್.ಹೆಗ್ಡೆ ಪ್ರಥಮ ಬಹುಮಾನ ಗಳಿಸಿದ್ದಾರೆ.

ಉಳಿದಂತೆ ಮಂಗಳೂರು ಸಂತ ಆಗ್ನೆಸ್ ಕಾಲೇಜಿನ ಅನನ್ಯ ರೈ ಎನ್. ಆರ್. ದ್ವಿತೀಯ, ಉಡುಪಿ ಪಿ.ಪಿ.ಸಿ. ಸಂಧ್ಯಾ ಕಾಲೇಜಿನ ಅಮೋಘ್ ಹೆಗ್ಡೆ ತೃತೀಯ ಬಹುಮಾನ ಗಳಿಸಿದರು. ಉಡುಪಿ ಪಿಪಿಸಿ ಸಂಧ್ಯಾ ಕಾಲೇಜು ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದರೆ, ವೈಕುಂಠ ಬಾಳಿಗಾ ಕಾನೂನು ಕಾಲೇಜು ರನ್ನರ್ ಅಪ್ ಪ್ರಶಸ್ತಿ ಪಡೆಯಿತು.

ಮಿಲಾಗ್ರಿಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ. ಡಾ. ಲಾರೆನ್ಸ್ ಸಿ ಡಿಸೋಜಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ಭಾಷಣ ಸ್ಪರ್ಧೆಗೆ ನಿಗದಿ ಪಡಿಸಿದ ವಿಷಯ ಇಂದು ದೇಶದಾದ್ಯಂತ ಅಶಾಂತಿಗೆ ಕಾರಣವಾದ ಸಿಎಎ ಮತ್ತು ಎನ್‌ಆರ್‌ಸಿ ಕುರಿತಂತೆ ಇದ್ದು, ಈ ಬಗ್ಗೆ ಸರಿಯಾದ ಸರಿಯಾದ ಮಾಹಿತಿ ಹೊಂದಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿಷಯದ ಪರ ಅಥವಾ ವಿರೋಧಲ್ಲಿ ಮಾತನಾಡುವ ಮೊದಲು ಕಾಯ್ದೆಗಳ ಪರಿಣಾಮಗಳ ಬಗ್ಗೆ ಅರಿತುಕೊಳ್ಳಬೇಕಾಗಿದೆ ಎಂದರು.

ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಸೋಫಿಯಾ ಡಾಯಸ್, ಸಂಘದ ನಿರ್ದೇಶಕ ಡಾ.ಹೆರಾಲ್ಡ್ ಮೊನಿಸ್, ಪ್ರೊ. ಚಂದ್ರಿಕಾ, ಕ್ಷೇಮಪಾಲನಾ ಸಂಘದ ಅಧ್ಯಕ್ಷ ಶರ್ವಿನ್ ಒಲಿವೆರಾ, ಕಾರ್ಯದರ್ಶಿ ಸುರಕ್ಷಿತಾ, ಸಾಂಸ್ಕೃತಿಕ ಕಾರ್ಯದರ್ಶಿ ರೆನ್ಸಿಟಾ ಉಪಸ್ಥಿತರಿದ್ದರು.

ರಮ್ಯಾ ಹಾಗೂ ಲಲಿತ್ ಕಾರ್ಯಕ್ರಮ ನಿರೂಪಿಸಿದರೆ, ಡಾ. ಹೆರಾಲ್ಡ್ ಮೊನಿಸ್ ಸ್ವಾಗತಿಸಿ, ಚಂದ್ರಿಕಾ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News