ಪಡುಬಿದ್ರಿ: ಚಿರತೆ ಸೆರೆಗೆ ಬೋನು ಇಟ್ಟ ಅರಣ್ಯ ಇಲಾಖೆ

Update: 2020-02-25 17:31 GMT

ಪಡುಬಿದ್ರಿ : ಫಲಿಮಾರಿನಲ್ಲಿ ಎರಡು ಆಡುಗಳ ಮೇಲೆ ದಾಳಿ ನಡೆಸಿದ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬೋನ್ ಇರಿಸಿದ್ದಾರೆ.

ಪಲಿಮಾರಿನ ಅಡ್ವೆ ಕೋಚಬಾಳಿಕೆಯಲ್ಲಿ ಸೋಮವಾರ ಸಂಜೆ ಝೈನಾಬಿ ಎಂಬುವರು ಮನೆ ಸಮೀಪ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಸಾಕು ಮೇಕೆಯೆರಡನ್ನು ಚಿರತೆ ತಿಂದುಹಾಕಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ನೀಡಿದ ದೂರಿನಂತೆ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಪ್ರದೇಶದಲ್ಲಿ ಮಂಗಳವಾರವೂ ಚಿರತೆ ಚಲನವಲನವನ್ನು ಗಮನಿಸಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ.

ಅದರಂತೆ ಪ್ರದೇಶದ ಸುತ್ತಮುತ್ತ ಅರಣ್ಯ ಇಲಾಖೆಯಿಂದ ಕೂಂಬಿಂಗ್ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಅರಣ್ಯಾಧಿಕಾರಿ ಕ್ಲಿಪರ್ಡ್ ಲೋಬೊ, ಉಪ ವಲಯ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ, ಸಿಬ್ಬಂದಿಗಳಾದ ಅಭಿಲಾಷ್, ಮಂಜುನಾಥ ನಾಯಕ್ ಚಾಲಕ ಜೋಯ್, ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಕೋಟ್ಯಾನ್ ಹಾಗೂ ಪಡುಬಿದ್ರಿ ಪೊಲೀಸ್ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News