ಅಂತರ್ ರಾಷ್ಟ್ರೀಯ ಕರಾಟೆ : ಅಲ್-ಫುರ್ಖಾನ್ ವಿದ್ಯಾರ್ಥಿಗೆ ಚಿನ್ನದ ಪದಕ

Update: 2020-02-25 17:40 GMT

ಮಂಗಳೂರು : 25ನೇ ಯೂರೋ-ಏಷ್ಯಾ ಅಂತರ್ ರಾಷ್ಟ್ರೀಯ WFSCO ಮುಕ್ತ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆ ಮುಂಬೈಯ ಪ್ರಿಯದರ್ಶಿನಿ ಸ್ಪೋಟ್ಸ್ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗೆ ಜರುಗಿತು.

ಈ ಸ್ಪರ್ಧೆಯಲ್ಲಿ ಅಲ್-ಫುರ್ಖಾನ್ ಇಸ್ಲಾಮಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸರೋಷ್ ಸೈಯದ್ ಅಲಿ,  14-15ನೇ ವಯೋಮಿತಿಯ ಕುಮಿಟಿ ವಿಭಾಗದಲ್ಲಿ ಚಿನ್ನದ ಪದಕವನ್ನು ಹಾಗೂ ಕಟಾ ವಿಭಾಗದಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾನೆ.

ಶಾಲಾ ನಿರ್ದೇಶಕಿ ಮುಮ್ತಾಝ್, ಪ್ರಾಚಾರ್ಯೆ ನಝ್ರಾನಾ, ಆಡಳಿತಾಧಿಕಾರಿ ಮುಹಮ್ಮದ್ ಶಹಾಮ್ ಹಾಗೂ ಶಿಕ್ಷಕರು ವಿದ್ಯಾರ್ಥಿಯ ಸಾಧನೆಯನ್ನು ಪ್ರಶಂಶಿಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News