ಇರಾನ್: ಆರೋಗ್ಯ ಸಚಿವರಿಗೇ ಕೊರೋನವೈರಸ್ ಸೋಂಕು!

Update: 2020-02-25 17:50 GMT

ಟೆಹರಾನ್ (ಇರಾನ್), ಫೆ. 25: ಇರಾನ್‌ನಲ್ಲಿ ಮಾರಕ ಕೊರೋನವೈರಸ್ ಸೋಂಕು ಭಾರೀ ವೇಗವಾಗಿ ಹರಡುತ್ತಿದೆ ಹಾಗೂ ಆ ದೇಶದ ಉಪ ಆರೋಗ್ಯ ಸಚಿವರೇ ಈ ರೋಗಕ್ಕೆ ತುತ್ತಾಗಿದ್ದಾರೆ. ಇದನ್ನು ಮಂಗಳವಾರ ಅವರೇ ಖಚಿತಪಡಿಸಿದ್ದಾರೆ.

ಅವರು ಸೋಮವಾರ ಟೆಹರಾನ್‌ನಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದಾಗ ಆಗಾಗ ಕೆಮ್ಮುತ್ತಿದ್ದರು ಹಾಗೂ ಬೆವರಿದಂತೆ ಕಂಡುಬಂದರು. ಕೋಮ್ ನಗರದಲ್ಲಿ ಸೋಂಕಿನಿಂದಾಗಿ 50 ಮಂದಿ ಮೃತಪಟ್ಟಿದ್ದಾರೆ ಎಂಬುದಾಗಿ ಸಂಸದರೊಬ್ಬರು ಮಾಡಿದ ಆರೋಪವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ನಿರಾಕರಿಸಿದರು. ಈ ಆರೋಪ ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಅವರು ಹೇಳಿದರು.

ಮಂಗಳವಾರ ಸರಕಾರಿ ಟಿವಿಯಲ್ಲಿ ಪ್ರಸಾರಗೊಂಡ ವೀಡಿಯೊದಲ್ಲಿ, ನನಗೆ ಸೋಂಕು ತಗಲಿದೆ ಎಂಬುದನ್ನು ಒಪ್ಪಿಕೊಂಡರು.

ಇರಾನ್: ಇನ್ನೂ ಮೂವರು ಕೊರೋನಕ್ಕೆ ಬಲಿ

ಈ ನಡುವೆ, ಇರಾನ್‌ನಲ್ಲಿ ಕೊರೋನವೈರಸ್‌ಗೆ ಇನ್ನೂ ಮೂವರು ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಈ ರೋಗಕ್ಕೆ ಬಲಿಯಾದವರ ಸಂಖ್ಯೆ 15ಕ್ಕೆ ಏರಿದೆ. ಚೀನಾದ ಹೊರಗಡೆ ಇದು ಅತ್ಯಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News