ಚೀನಾ: ಕೊರೋನವೈರಸ್ ಸಾವಿನ ಸಂಖ್ಯೆ 2,666ಕ್ಕೆ

Update: 2020-02-25 17:55 GMT

ಬೀಜಿಂಗ್, ಫೆ. 25: ನೂತನ-ಕೊರೋನವೈರಸ್ ಸೋಂಕಿನ ಆಡುಂಬೊಲವಾಗಿರುವ ಚೀನಾದಲ್ಲಿ ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ ಮಂಗಳವಾರ 2666ಕ್ಕೆ ಏರಿದೆ ಹಾಗೂ ಒಟ್ಟು ಸುಮಾರು 77,800 ಮಂದಿ ಈ ಸೋಂಕಿಗೆ ಒಳಗಾಗಿದ್ದಾರೆ ಎಂದು ಇಲ್ಲಿನ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಅದೇ ವೇಳೆ, ಜಾಗತಿಕ ಮಟ್ಟದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ ಮಂಗಳವಾರ 80,000 ದಾಟಿದೆ.

ಚೀನಾದಲ್ಲಿ ಒಂದು ದಿನದ ಅವಧಿಯಲ್ಲಿ 70 ಹೊಸ ಸಾವಿನ ಪ್ರಕರಣಗಳು ವರದಿಯಾಗಿವೆ ಹಾಗೂ ಹೊಸದಾಗಿ 500ಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ತಿಳಿಸಿದೆ.

ಶುಭ ಸಮಾಚಾರವೆಂದರೆ, ಸೋಮವಾರ 23 ಪ್ರಾಂತ ಮಟ್ಟದ ವಲಯಗಳಲ್ಲಿ ಯಾವುದೆ ಕೋವಿಡ್-19 ಸೋಂಕು ಪ್ರಕರಣ ವರದಿಯಾಗಿಲ್ಲ ಎಂದು ಆಯೋಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News