ಶರೀಫ್ ತಲೆತಪ್ಪಿಸಿಕೊಂಡವರೆಂದು ಘೋಷಿಸಿದ ಪಾಕ್ ಸರಕಾರ

Update: 2020-02-26 18:39 GMT

ಇಸ್ಲಾಮಾಬಾದ್, ಫೆ. 26: ಜಾಮೀನು ಶರತ್ತುಗಳನ್ನು ಪೂರೈಸದಿರುವುದಕ್ಕಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರನ್ನು ಅಲ್ಲಿನ ಸರಕಾರವು ‘ತಲೆತಪ್ಪಿಸಿಕೊಂಡವರು’ ಎಂಬುದಾಗಿ ಘೋಷಿಸಿದೆ ಎಂದು ಬುಧವಾರ ಮಾಧ್ಯಮವೊಂದು ವರದಿ ಮಾಡಿದೆ.

ವೈದ್ಯಕೀಯ ನೆಲೆಯಲ್ಲಿ ನಾಲ್ಕು ವಾರಗಳ ಕಾಲ ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ ಬಳಿಕ, 70 ವರ್ಷದ ಶರೀಫ್ ನವೆಂಬರ್‌ನಲ್ಲಿ ಚಿಕಿತ್ಸೆಗಾಗಿ ಲಂಡನ್‌ಗೆ ಪ್ರಯಾಣಿಸಿದ್ದಾರೆ.

ಲಂಡನ್‌ನಲ್ಲಿರುವ ವೈದ್ಯರು ನೀಡುವ ವೈದ್ಯಕೀಯ ವರದಿಯನ್ನು ಶರೀಫ್ ಪಾಕಿಸ್ತಾನ ಸರಕಾರಕ್ಕೆ ಸಲ್ಲಿಸಬೇಕು ಎಂಬುದಾಗಿ ಅವರ ಜಾಮೀನು ಶರತ್ತು ಹೇಳುತ್ತದೆ. ಈ ಶರತ್ತನ್ನು ಅವರು ಪೂರೈಸಿಲ್ಲ ಎಂದು ಮಂಗಳವಾರ ಹೇಳಿರುವ ಪಾಕಿಸ್ತಾನ ಸರಕಾರವು ಅವರ ಜಾಮೀನನ್ನು ವಿಸ್ತರಿಸದಿರಲು ನಿರ್ಧರಿಸಿದೆ ಹಾಗೂ ಅವರನ್ನು ‘ತಲೆತಪ್ಪಿಸಿಕೊಂಡವರು’ ಎಂಬುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News