ಫೆ.28: ಸಂವಿಧಾನ ವಿರೋಧಿ ಕಾನೂನು ಖಂಡಿಸಿ ಮಾಣಿಯಲ್ಲಿ ಜನಜಾಗೃತಿ ಸಮಾವೇಶ

Update: 2020-02-27 08:40 GMT

ವಿಟ್ಲ, ಫೆ.27: ಮಾಣಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಸಂವಿಧಾನ ರಕ್ಷಿಸಿ,ದೇಶ ಉಳಿಸಿ. ಎಂಬ ಧ್ಯೇಯ ವಾಕ್ಯದೊಂದಿಗೆ ಸಂವಿಧಾನ ವಿರೋಧಿ ಕರಾಳ ಕಾನೂನನ್ನು ಹಾಗೂ ದೇಶದ ಉದ್ದಗಲಕ್ಕೂ ಫ್ಯಾಶಿಸ್ಟ್ ಶಕ್ತಿಗಳಿಂದ ನಡೆಯುತ್ತಿರುವ ಕಗ್ಗೊಲೆಗಳನ್ನು ಖಂಡಿಸಿ ಫೆ.28ರಂದು ಅಪರಾಹ್ನ 2:30ಕ್ಕೆ ಮಾಣಿಯ ಗಾಂಧಿ ಮೈದಾನದಲ್ಲಿ  ಜನಜಾಗೃತಿ ಸಮಾವೇಶ ನಡಯಲಿದೆ.

ಸುದ್ದಿ ಟಿವಿ ಸಂಪಾದಕ ಶಶಿಧರ್ ಭಟ್, ಹಿಂದುಳಿದ ವರ್ಗಗಳ ಆಯೋಗ ಮಾಜಿ ಅಧ್ಯಕ್ಷ ದ್ವಾರಕನಾಥ್, ಪ್ರಗತಿಪರ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಬೆಂಗಳೂರು, ಮೈಸೂರು ಉರಿಲಿಂಗಪೆದ್ದಿ ಮಠದ ಶ್ರಿ  ಜ್ಞಾನಪ್ರಕಾಶ್  ಸ್ವಾಮಿಜಿ , ಮಾಜಿ ಸಚಿವ ಬಿ.ರಮಾನಾಥ ರೈ, ನಿವೃತ್ತ ಪೋಲಿಸ್ ಅಧಿಕಾರಿ ಜಿ ಎ ಬಾವ, ಜೆ.ಡಿ.ಎಸ್. ಮುಖಂಡ ಎಂ.ಬಿ. ಸದಾಶಿವ ಸುಳ್ಯ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಯಾಕೂಬ್  ಸಅದಿ ಬೆಳ್ತಂಗಡಿ, ಪ್ರಗತಿಪರ ಹೋರಾಟಗಾರ್ತಿ ನೇಮಿಚಂದ್ರ ಬೆಳಗಾವಿ, ಪಿ.ಎಫ್.ಐ ಮುಖಂಡ ಅಡ್ವೊಕೇಟ್ ಅಮೀನ್ ಮೊಹ್ಸಿನ್‌, ಸಾಮಾಜಿಕ ಹೋರಾಟಗಾರ ಹನೀಫ್ ಖಾನ್ ಕೊಡಾಜೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಮಾಣಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News