ದೆಹಲಿ ಹಿಂಸಾಚಾರ ಆಘಾತಕಾರಿ: ಎಸ್ಕೆಎಸ್ಸೆಸ್ಸೆಫ್

Update: 2020-02-27 08:47 GMT

ಬಂಟ್ವಾಳ, ಫೆ.27: ದೆಹಲಿಯಲ್ಲಿ ನಡೆಯುತ್ತಿರುವ ಪ್ರಚೋದಿತ ಹಿಂಸಾತ್ಮಕ ಗಲಭೆ ಆಘಾತಕಾರಿ ಬೆಳವಣಿಗೆಯಾಗಿದೆ. ದೇಶದ ಅಲ್ಪ ಸಂಖ್ಯಾತರನ್ನು ಭಯಭೀತರನ್ನಾಗಿಸಿದೆ ಎಂದು ಸಮಸ್ತ ಮುಶಾವರ ಸದಸ್ಯ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಹೇಳಿದ್ದಾರೆ.

ಆಲಡ್ಕದ ಎಸ್.ಎಸ್. ಆಡಿಟೋರಿಯಂನಲ್ಲಿ ನಡೆದ ಎಸ್ಕೆಎಸ್ಸೆಸ್ಸೆಫ್ ದ‌.ಕ. ಜಿಲ್ಲೆ ಕೌನ್ಸಿಲ್ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುವಾಶಿರ್ವಚನ ನೀಡಿದರು. ಸೈಯದ್ ಅಮೀರ್ ತಂಙಳ್ ಕಿನ್ಯ ಮಜ್ಲಿಸುನ್ನೂರಿಗೆ ನೇತೃತ್ವ ನೀಡಿದರು. ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಕಿನ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅನೀಸ್ ಕೌಸರಿ, ಶಾಫಿ ದಾರಿಮಿ, ತಾಜುದ್ದೀನ್ ರಹ್ಮಾನಿ, ಹನೀಫ್ ಧೂಮಳಿಕೆ, ಸಿದ್ದೀಖ್ ಅಬ್ದುಲ್ ಖಾದರ್, ಅಶ್ರಫ್ ಕಡಬ,  ಅಬ್ದುಲ್ ಅಝೀಝ್ ಮಲಿಕ್, ಇಕ್ಬಾಲ್ ಬಾಳಿಲ, ಮುಹಮ್ಮದ್ ಕುಂಞಿ ಮಾಸ್ಟರ್, ಆರಿಫ್ ಬಡಕಬೈಲ್, ಅಬ್ದುಲ್ ರಶೀದ್ ರಹ್ಮಾನಿ, ಪಿ.ಎ.ಝಕರಿಯ್ಯ ಮರ್ಧಾಳ, ಇ.ಕೆ.ಅಬ್ದುರ್ರಹ್ಮಾನ್ ಮೌಲವಿ, ಶರೀಫ್ ಮೂಸ ಕುದ್ದುಪದವು, ಹಕೀಂ ಪರ್ತಿಪ್ಪಾಡಿ,   ಅಬ್ದುಲ್  ಮಜೀದ್ ದಾರಿಮಿ ಮುಂತಾದವರು ಭಾಗವಹಿಸಿದ್ದರು.

ಇಸ್ಮಾಯೀಲ್ ಯಮಾನಿ ತಿಂಗಳಾಡಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News