ಮಂಗಳೂರು: ‘ಡಿ ಡಾಟ್ ಸ್ಪೋರ್ಟ್ಸ್’ ಮಳಿಗೆ ಶುಭಾರಂಭ

Update: 2020-02-27 09:11 GMT

ಮಂಗಳೂರು, ಫೆ.27: ಕರಾವಳಿಯಾದ್ಯಂತ ಕ್ರೀಡಾ ಸಾಮಗ್ರಿಗಳ ಮಾರಾಟಕ್ಕೆ ಹೆಸರುವಾಸಿಯಾಗಿರುವ ‘ಡಿ ಡಾಟ್ ಸ್ಪೋರ್ಟ್ಸ್’ ಸಂಸ್ಥೆಯ ಎರಡನೇ ಮಳಿಗೆಯು ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಬಳಿ ಮಂಗಳಾದೇವಿ ಪ್ಯಾಲೇಸ್ ಕಟ್ಟಡದ ಮೊದಲ ಮಹಡಿಯಲ್ಲಿ ಗುರುವಾರ ಬೆಳಗ್ಗೆ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಯು.ಟಿ. ಖಾದರ್, ‘ಡಿ ಡಾಟ್ ಸ್ಪೋರ್ಟ್ಸ್’ ಕ್ರಿಕೆಟ್, ಫುಟ್‌ಬಾಲ್ ಸಹಿತ ಎಲ್ಲ ಬಗೆಯ ಆಟೋಟಗಳ ಪರಿಕರಗಳ ಅಪಾರ ಸಂಗ್ರಹವನ್ನು ಹೊಂದಿದೆ. ಭವಿಷ್ಯದಲ್ಲಿ ಸಂಸ್ಥೆಯ ಇನ್ನಷ್ಟು ಮಳಿಗೆಗಳು ತೆರೆದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಳಿಗೆಗೆ ಭೇಟಿ ನೀಡಿ, ಶುಭ ಹಾರೈಸಿದರು.
ಮುಸ್ಲಿಂ ಯುವ ಲೀಗ್ ರಾಜ್ಯಾಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, ಕ್ರೀಡಾ ಜಗತ್ತನ್ನು ಟಿವಿಗಳಲ್ಲಿ ನೋಡಿ ಖುಷಿ ಪಡುವ ಕಾಲವಿತ್ತು. ಈಗ ಜಿಲ್ಲಾದ್ಯಂತ ಪಂದ್ಯಾಟಗಳನ್ನು ಆಯೋಜಿಸಲಾಗುತ್ತಿದ್ದು, ಕೈಗೆಟುವ ದರದಲ್ಲಿ ಎಲ್ಲ ಬಗೆಯ ಕ್ರೀಡಾ ಪರಿಕರಗಳನ್ನು ಖರೀದಿಸಬಹುದಾಗಿದೆ. ಸಂಸ್ಥೆಯು ಉತ್ತಮ ಗುಣಮಟ್ಟದ ಪರಿಕರಗಳನ್ನು ಪೂರೈಕೆ ಮಾಡುತ್ತಿದೆ. ಸಂಸ್ಥೆ ಉನ್ನತ ಸ್ಥಾನಕ್ಕೇರಲಿ ಎಂದು ಹಾರೈಸಿದರು.

ಮಳಿಗೆಯಲ್ಲಿ ಸಬ್ಲಿಮೇಶನ್ ಜರ್ಸಿ, ಸ್ಟಿಚ್ ಮಾಡೆಲ್ ಜರ್ಸಿ, ಸ್ಕೂಲ್ ಸ್ಪೋರ್ಟ್ಸ್ ಯುನಿಫಾರ್ಮ್, ಟ್ರೋಫಿಗಳು, ಕಾರ್ಪೊರೇಟ್ ಟಿ-ಶರ್ಟ್ಸ್, ಟ್ರಾಕ್ ಪ್ಯಾಂಟ್ಸ್, ಶಾರ್ಟ್ಸ್, ಫುಟ್ಬಾಲ್, ಕ್ರಿಕೆಟ್, ಕೇರಂ, ಸ್ಪೋರ್ಟ್ಸ್ ಶೂಸ್, ಶಟಲ್‌ಕಾಕ್, ಚೆಸ್, ಜಂಪ್ ರೋಪ್, ಯೋಗ ಮ್ಯಾಟ್, ವೃತ್ತಿಪರ ಸ್ಕೇಟಿಂಗ್ ಶೂ, ರೋಲರ್ ಸ್ಕೇಟ್ಸ್, ಕ್ಯಾಪ್, ಸಹಿತ ಎಲ್ಲ ಬಗೆಯ ಕ್ರೀಡಾ ಪರಿಕರಗಳನ್ನು ಲಭ್ಯ ಇವೆ.

ಸಮಾರಂಭದಲ್ಲಿ ‘ಡಿ ಡಾಟ್ ಸ್ಪೋರ್ಟ್ಸ್’ ಮಳಿಗೆಯ ಮಾಲಕರಾದ ಅಬ್ದುಲ್ ರಹಿಮಾನ್, ಮುಹಮ್ಮದ್ ಕುಂಞಿ, ಇಬ್ರಾಹೀಂ ಟಿ., ಅಬ್ದುಲ್ ಸತ್ತಾರ್, ಅನೀರ್ ಮಂಗಳೂರು, ಫುಟ್ಬಾಲ್ ಕ್ರೀಡಾಪಟು ಉಮೇಶ್ ಉಚ್ಚಿಲ್, ಡಿ.ಎಂ.ಅಸ್ಲಂ, ಸುಹೈಲ್, ರಫೀಕ್, ಮುಸ್ತಫಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News