ದೆಹಲಿ ಹಿಂಸಾಚಾರವನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ಬಂಟ್ವಾಳದಲ್ಲಿ ಪ್ರತಿಭಟನೆ

Update: 2020-02-27 09:22 GMT

ಬಂಟ್ವಾಳ: ದೆಹಲಿ ಹಿಂಸಾಚಾರ ಪೊಲೀಸ್ ಹಾಗೂ ಸಂಘಪರಿವಾರ ಪ್ರಾಯೋಜಿತ ಎಂದು ಆರೋಪಿಸಿ, ಹಿಂಸಾಚಾರವನ್ನು ಖಂಡಿಸಿ ಬಿ.ಸಿ.ರೋಡ್ ನ ಕೈಕಂಬ ಜಂಕ್ಷನ್ ಬಳಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಪ್ರತಿಭಟನಾ ಸಭೆ ನಡೆಯಿತು. 

ಕ್ಯಾಂಪಸ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷ ಫಹದ್ ಅನ್ವರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಮಾತನಾಡಿ, "ನಿಮ್ಮ  ಲಾಠಿ, ಬಂದೂಕುಗಳನ್ನು ತೋರಿಸಿ  ಪ್ರತಿಭಟನೆಯನ್ನು ದಮನಿಸುವ  ಪ್ರಯತ್ನ ಸಫಲವಾಗದು. ಈ ಹೋರಾಟವು ಇಮ್ಮಡಿಗೊಳ್ಳಲಿದೆ. ಅಲ್ಲದೆ ದೆಹಲಿ ಹಿಂಸಾಚಾರಕ್ಕೆ ಕಾರಣವಾದ ಎಲ್ಲಾ  ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಬೇಕು ಹಾಗೂ ಅಲ್ಲಿನ ನಾಗರಿಕರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು" ಎಂದು ಒತ್ತಾಯಿಸಿದರು.

ಬಂಟ್ವಾಳ ಪುರಸಭಾ ಸದಸ್ಯರಾದ ಮುನೀಶ್ ಅಲಿ ಮಾತನಾಡಿದರು. ತಾಲೂಕು ಸಮಿತಿ ಸದಸ್ಯರಾದ ಫೈಝಾನ್,  ತಂಝೀಲ್,  ನಿಯಾಝ್, ಝೈದ್ ಹಾಗು ಮತ್ತಿತರು ಉಪಸ್ಥಿತರಿದ್ದರು. ನಾಸಿರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News