ಓಶಿಯನ್ ಪರ್ಲ್‌ನಲ್ಲಿ 'ಹೈದರಾಬಾದಿ ಆಹಾರ ಉತ್ಸವ' ಆರಂಭ

Update: 2020-02-27 09:26 GMT

ಮಂಗಳೂರು, ಫೆ.27:  ನಗರದ ನವಭಾರತ್ ಸರ್ಕಲ್ ಸಮೀಪದ ಓಶಿಯನ್ ಪರ್ಲ್ ಹೊಟೇಲ್‌ ನ ಕೋರಲ್ ಮಲ್ಟಿ ಕ್ಯೂಸಿನ್ ಫೈನ್ ಡೈನ್ ರೆಸ್ಟೋರೆಂಟ್ ನಲ್ಲಿ  15 ದಿನಗಳ 'ಹೈದರಾಬಾದಿ ಆಹಾರ ಉತ್ಸವ'ವು ಫೆ.25ರಂದು ಪ್ರಾರಂಭವಾಗಿದೆ. ಮಾರ್ಚ್ 10ರವರೆಗೆ ಈ ಉತ್ಸವ ನಡೆಯಲಿದೆ. 

ಈ ಉತ್ಸವದಲ್ಲಿ ನುರಿತ ಶೆಫ್ ಗಳು ತಯಾರಿಸುವ ವಿವಿಧ  ಹೈದರಾಬಾದಿ ಖಾದ್ಯಗಳು  ಆಹಾಯಪ್ರಿಯರಿಗೆ ರಸದೌತಣ ಬಡಿಸಲಿವೆ. ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ಸಮಯದಲ್ಲಿ ಈ ಖಾದ್ಯಗಳು ಲಭ್ಯವಿರಲಿವೆ. 

ಆಹಾರ ಉತ್ಸವದಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪಾಕ ಪದ್ಧತಿಯ ವಿವಿಧ ಬಗೆಯ ಹೈದರಾಬಾದಿ ಖಾದ್ಯಗಳನ್ನು ಸವಿಯಬಹುದು. ಎಲ್ಲ ಮಾಂಸಾಹಾರಗಳು ಹಲಾಲ್ ದೃಢೀಕೃತ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. 

''ಮಂಗಳೂರು ಸಹಿತ ದ.ಕ. ಜಿಲ್ಲೆಯ ಆಹಾರಪ್ರಿಯರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಆಹಾರ, ಖಾದ್ಯಗಳನ್ನು ಉತ್ಸವಗಳ ಮೂಲಕ ಓಶಿಯನ್ ಪರ್ಲ್ ತರುತ್ತಿದೆ. ಈಗ  ಹೈದರಾಬಾದಿ ಆಹಾರ ಉತ್ಸವ ಆಯೋಜಿಸಲಾಗಿದೆ. ರುಚಿಕರ ಬಿರಿಯಾನಿ, ವಿಶೇಷ ಹೈದರಾಬಾದಿ ಹಲೀಮ್, ಕಬಾಬ್ ಸಹಿತ ವಿವಿಧ ನಮೂನೆಯ ಖಾದ್ಯಗಳು ಆಹಾರಪ್ರಿಯರ ಮನತಣಿಸಲಿವೆ. ಮುಂದಿನ ದಿನಗಳಲ್ಲೂ ವಿವಿಧ ಆಹಾರ ಉತ್ಸವಗಳನ್ನು ಆಯೋಜಿಸಲಿದ್ದೇವೆ. ಆಹಾರಪ್ರಿಯರು ಈ ಉತ್ಸವವನ್ನು ಖಂಡಿತ ಸ್ವಾಗತಿಸಲಿದ್ದಾರೆ'' ಎಂದು ಓಶಿಯನ್ ಪರ್ಲ್ ಗ್ರೂಪ್ ಆಫ್ ಹೊಟೇಲ್ಸ್‌ನ ಉಪಾಧ್ಯಕ್ಷ ಗಿರೀಶ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ. 

‘ಒತ್ತಡದ ಬದುಕಿನ ಜಂಜಾಟದಿಂದ ಸ್ವಲ್ಪ ಸಮಯ ನೆಮ್ಮದಿ ಪಡೆಯಲು ಹಾಗು ಜನರಲ್ಲಿ ಸಕಾರಾತ್ಮಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿವರ್ಷವೂ ಇಂತಹ ಆಹಾರ ಉತ್ಸವಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಇದರಿಂದ ನಗರದ ಜನರಲ್ಲಿ ಕುಟುಂಬ ಹಾಗು ಮಿತ್ರರ ಜೊತೆ ಖುಷಿಯ ಸಮಯ ಕಳೆಯಲು ಹೊಸ ಅವಕಾಶ ಸಿಗುತ್ತದೆ ’ ಎನ್ನುತ್ತಾರೆ ಗಿರೀಶ್.

‘ಆಹಾರಪ್ರಿಯರಿಗೆ ಉತ್ತಮ ಗುಣಮಟ್ಟದ ಖಾದ್ಯ ನೀಡಲು ಸಂಸ್ಥೆ ಪ್ರಾಮುಖ್ಯತೆ ನೀಡುತ್ತದೆ. ಅತ್ಯುತ್ತಮ ಆಹಾರ ಸವಿಯಲು ಗ್ರಾಹಕರು ಕುಟುಂಬ ಸಮೇತ ಆಗಮಿಸುತ್ತಿರುವುದು ಉತ್ಸವಕ್ಕೆ ಪ್ರೋತ್ಸಾಹದಾಯಕವಾಗಿದೆ’ ಎಂದು ಗಿರೀಶ್ ಸ್ಪಷ್ಟಪಡಿಸಿದರು.

‘ಹೈದರಾಬಾದಿ ಪಾಕಪದ್ಧತಿಯ ಹೆಚ್ಚಿನ ಆಹಾರ ಖಾದ್ಯಗಳು ಸ್ಟ್ರೀಟ್ ಫುಡ್‌ಗಳಾಗಿ ಭಾರೀ ಖ್ಯಾತಿ ಪಡೆದಿವೆ. ಉತ್ಸಾಹಿ ಆಹಾರಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಟ್ರೀಟ್ ಫುಡ್‌ಗೆ ಮುಗಿಬೀಳುತ್ತಾರೆ. ಆಹಾರ ಉತ್ಸವದಲ್ಲಿ ದೊರೆಯುವ ಖಾದ್ಯಗಳು ಮಂಗಳೂರು ಸಹಿತ ಸುತ್ತಮುತ್ತಲಿನಲ್ಲಿ ಎಲ್ಲೂ ಕಂಡು ಬರುವುದಿಲ್ಲ. ಕರಾವಳಿಗರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಹಾರ ಉತ್ಸವದಲ್ಲಿ ಪಾಲ್ಗೊಂಡು ಭಾರತದ ಅತ್ಯಂತ ಬೇಡಿಕೆಯ ಈ ಖಾದ್ಯಗಳನ್ನು ಆನಂದಿಸಬಹುದು’ ಎಂದು ಗಿರೀಶ್ ಮಾಹಿತಿ ನೀಡಿದರು.

ಮುಂದೆ ಅಂತಾರಾಷ್ಟ್ರೀಯ ಮಟ್ಟದ ಆಹಾರ ಉತ್ಪನ್ನಗಳಿಗೆ ಆದ್ಯತೆ ನೀಡಲಾಗುತ್ತದೆ. ಗ್ರಾಹಕರೂ ಅಂತಹ ಖಾದ್ಯಗಳನ್ನೇ ಸವಿಯಲು ಇಷ್ಟಪಡುತ್ತಾರೆ. ಮೆಕ್ಸಿಕನ್ ಅಥವಾ ಇಟಾಲಿಯನ್ ಖಾದ್ಯಗಳ ರುಚಿಯನ್ನು ಮುಂದಿನ ದಿನಗಳಲ್ಲಿ ಕರಾವಳಿಗರಿಗೆ ಪರಿಚಯಿಸಲಿದ್ದೇವೆ’ ಎಂದು ಅವರು  ಹೇಳಿದರು.

ಬಗೆಬಗೆಯ ಖಾದ್ಯ: ಹೈದರಾಬಾದಿ  ಹಲೀಂ, ಮುರ್ಗ್ ಮಲಾಯಿ ಕೊರ್ಮ, ಹೈದರಾಬಾದಿ ದಮ್ ಕಾ ಮುರ್ಗ್, ಸಸ್ಯಾಹಾರಿ ಖಾದ್ಯಗಳು, ಸಿಹಿ ತಿನಿಸುಗಳು, ಮುರ್ಗ್ ನಿಝಾಮಿ ಸೀಖ್, ನೂರಾನಿ ಸಬ್ಝ್ ಸೀಖ್, ಗೋಶ್ತ್ ಶಿಕಂಪುರಿ ಕಬಾಬ್, ಕೊಫ್ತಾ, ದಾಲ್ಚಾ ಗೋಶ್ತ್, ವಿವಿಧ ಸೂಪ್ ಗಳು, ಪರಾಟ, ನಾನ್ ಗಳು  ಸಹಿತ ಹಲವು ಬಗೆಯ ಖಾದ್ಯಗಳು ಆಹಾರ ಉತ್ಸವದಲ್ಲಿ ಲಭ್ಯ ಇವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News