×
Ad

ಕಡಬ : ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ನಾಪತ್ತೆ

Update: 2020-02-27 17:45 IST

ಕಡಬ, ಫೆ. 27: ಸ್ನಾನಕ್ಕೆಂದು ನದಿಗೆ ಇಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿರುವ ಘಟನೆ ಕುಮಾರಧಾರ ನದಿಯಲ್ಲಿ ಗುರುವಾರ ನಡೆದಿದೆ.

ನಾಪತ್ತೆಯಾಗಿರುವ ಯುವಕನನ್ನು ಕೊಯಿಲ ಜನತಾ ಕಾಲನಿ ನಿವಾಸಿ ಯೂಸುಫ್ ಎಂಬವರ ಪುತ್ರ ಅರ್ಫಾಝ್ (22) ಎಂದು ಗುರುತಿಸಲಾಗಿದೆ.

ಅರ್ಫಾದ್ ಗುರುವಾರ ತನ್ನ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ಕೊಯಿಲ ಗ್ರಾಮದ ಸುದೆಂಗಳ ಸಮೀಪ ಕುಮಾರಧಾರ ನದಿಗಿಳಿದಿದ್ದು, ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ಕುಮಾರಧಾರ‌ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News