ಬಂಟ್ವಾಳ ತಾಲೂಕು ಸಂವಿಧಾನ ಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ

Update: 2020-02-27 13:57 GMT

ಬಂಟ್ವಾಳ, ಫೆ.27: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‍ಆರ್‍ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‍ಪಿಆರ್) ಪ್ರಕ್ರಿಯೆಯ ವಿರುದ್ಧ ದೇಶದ ಉದ್ದಗಲಕ್ಕೂ ಪ್ರತಿಭಟನೆ, ಹೋರಾಟಗಳು ನಡೆಯುತ್ತಿದ್ದು ಈ ಮಧ್ಯೆ ಸಂವಿಧಾನದ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ, ಚರ್ಚೆ, ಜಾಗೃತಿಯನ್ನು ನಡೆಸುವ ಉದ್ದೇಶದಿಂದ ವಿವಿಧ ಸಂಘಟನೆ, ಪಕ್ಷ ಹಾಗೂ ತಾಲೂಕಿನ ಪ್ರಮುಖರನ್ನು ಒಟ್ಟು ಸೇರಿಸಿ ಬಂಟ್ವಾಳ ತಾಲೂಕು ಸಂವಿಧಾನ ಸಂರಕ್ಷಣಾ ಸಮಿತಿಯೊಂದನ್ನು ರಚಿಸಲಾಗಿದೆ.

ಇತ್ತೀಚೆಗೆ ಬಂಟ್ವಾಳದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ  ಸಮಾಜದ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವ ಪ್ರಮುಖರು ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯ ಅಧ್ಯಕ್ಷರಾಗಿ ಅಶ್ರಫ್ ವಿ.ಎಚ್. ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಮುನೀಶ್ ಅಲಿ ಬಂಟ್ವಾಳ ಅವರನ್ನು ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷರಾಗಿ ಮುಹಮ್ಮದ್ ಬಾವ ಫರಂಗಿಪೇಟೆ, ಶರೀಫ್ ಟಿ.ಕೆ. ತುಂಬೆ, ಶಾಹುಲ್ ಹಮೀದ್ ಎಸ್.ಎಚ್., ಅಬೂಬಕ್ಕರ್ ಕೆ.ಎಚ್., ಹನೀಫ್ ಖಾನ್, ಜೊತೆ ಕಾರ್ಯದರ್ಶಿಯಾಗಿ ಲುಕ್ಮಾನ್, ಹಸೈನರ್ ಪಿ.ಕೆ. ಕುಕ್ಕಾಜೆ, ಇರ್ಫಾನ್ ತುಂಬೆ, ಇಮ್ತಿಯಾಝ್ ಗೋಳ್ತಮಜಲು, ಶಾಹುಲ್ ಎಸ್.ಪಿ. ಹಾಗೂ ಖಚಾಂಚಿಯಾಗಿ ಮುಹಮ್ಮದ್ ಸಾಗರ್ ಅವರನ್ನು ಆಯ್ಕೆ ಮಾಡಲಾಗಿದೆ.

ಸಮಿತಿಯ ಸದಸ್ಯರಾಗಿ ಎಂ.ಎಸ್.ಮುಹಮ್ಮದ್, ಜಬ್ಬಾರ್ ಮಾರಿಪಳ್ಳ, ಅಬ್ಬಾಸ್ ಅಲಿ ಬೊಳಂತ್ತೂರು, ವಕೀಲ ಹಾತಿಂ, ವಕೀಲ ಇಮ್ತಿಯಾಝ್, ಲತೀಫ್ ಅರಫಾ ವಳವೂರು, ಉಸ್ಮಾನ್ ಕಳಾಯಿ, ಶಾಕಿರ್ ಅಳಕೆಮಜಲು, ರಹೀಂ ಪಿ.ಎ., ಶಾಹುಲ್ ಹಮೀದ್ ಕನ್ಯಾನ, ಹಮೀದ್ ಕನ್ಯಾನ, ಝಕರಿಯಾ ಗೋಳ್ತಮಜಲು, ಖಲಂದರ್ ಪರ್ತಿಪಾಡಿ, ಸಲೀಂ ಕುಂಪನಮಜಲು, ನೌರೀಶ್ ಸಜಿಪ, ಮುಸ್ತಾಕ್ ತಲಪಾಡಿ, ಅಬೂಬಕರ್ ಮದ್ದ, ಶಾಹುಲ್ ಹಮೀದ್ ಪಲ್ರ್ಯ, ಹಾಜಿ ಬಶೀರ್ ತಲಪಾಡಿ, ಅನ್ವರ್ ಕಲ್ಲಗುಡ್ಡೆ, ರಶೀದ್ ವಗ್ಗ, ಇಸ್ಮಾಯೀಲ್ ಮಿತ್ತಬೈಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಆಯ್ಕೆಯ ಬಳಿಕ ಮಾತನಾಡಿದ ಸಮಿತಿಯ ಅಧ್ಯಕ್ಷ ವಿ.ಎಚ್.ಅಶ್ರಫ್, ದೇಶದ ಸಂವಿಧಾನವನ್ನೇ ನಾಶ ಮಾಡಲು ಆಡಳಿತದಲ್ಲಿ ರುವ ಬಿಜೆಪಿ ಹಾಗೂ ಆರೆಸ್ಸೆಸ್ ಹುನ್ನಾರ ಹೂಡಿವೆ. ಅದಕ್ಕಾಗಿ ಸಂವಿಧಾನ ವಿರೋಧಿಯಾದ ಕರಾಳ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಸಂರಕ್ಷಣೆ ದೇಶದ ಪ್ರತೀಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ, ಧಾರ್ಮಿಕ ಸಂಘಟನೆಗಳ ಹಾಗೂ ಸಮಾಜದ ವಿವಿಧ ರಂಗದಲ್ಲಿ ಗುರುತಿಸಿಕೊಂಡಿರುವ ಪ್ರಮುಖರನ್ನೊಳಗೊಂಡ ಬಂಟ್ವಾಳ ತಾಲೂಕು ಸಂವಿಧಾನ ಸಂರಕ್ಷಣಾ ಸಮಿತಿಯನ್ನು ರಚಿಸಲಾಗಿದೆ. ಸಂವಿಧಾನದ ಮೌಲ್ಯಕ್ಕೆ ಉಂಟಾಗುವ ಅಪಾಯವನ್ನು ಎದುರಿಸುವುದು ಈ ಸಮಿತಿಯ ಉದ್ದೇಶವಾಗಿದೆ. ಈ ಸಮಿತಿಯೊಂದಿಗೆ ದಲಿತ ಸಂಘಟನೆಗಳ ಸದಸ್ಯರ ಸಹಿತ ಎಲ್ಲಾ ಧರ್ಮಗಳ ಜನರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.                                                                                                                                                 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News