ದೆಹಲಿ ಹಿಂಸಾಚಾರ ಖಂಡಿಸಿ ‘ಶಾಂತಿ ಪ್ರಿಯ ನಾಗರಿಕರು-ಮಂಗಳೂರು’ವತಿಯಿಂದ ಮೊಂಬತ್ತಿ ಹಿಡಿದು ಪ್ರತಿಭಟನೆ

Update: 2020-02-27 15:26 GMT

ಮಂಗಳೂರು, ಫೆ.27: ದೆಹಲಿಯಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ‘ಶಾಂತಿ ಪ್ರಿಯ ನಾಗರಿಕರು-ಮಂಗಳೂರು’ ಇದರ ವತಿಯಿಂದ ಗುರುವಾರ ಸಂಜೆ ನಗರದ ಈದ್ಗಾ ಮಸೀದಿಯ ಬಳಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯಿತು.

ಮೂರು ನಿಮಿಷಗಳ ಕಾಲ ಮೊಂಬತ್ತಿ ಪ್ರದರ್ಶಿಸಿ ಮೌನ ಪ್ರಾರ್ಥನೆ ನಡೆಸಿದ ನಂತರ ಶಾಂತಿಪ್ರಿಯ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ‘ದೆಹಲಿಯ ಪರಿಸ್ಥಿತಿ ಚಿಂತಾಜನಕವಾಗಿದೆ. ಪರೀಕ್ಷೆಗೆ ಕಷ್ಟಪಟ್ಟು ಓದಿದ ಎಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಕಣ್ಮುಂದೆ ಬೆಂಕಿಯ ಜ್ವಾಲೆಯೇ ಕಾಣಿಸುತ್ತಿದೆ. ಅದನ್ನು ನಂದಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕಿದೆ. ಸೌಹಾರ್ದತೆ, ಸಹಬಾಳ್ವೆ, ಭಾತೃತ್ವವು ದೇಶದ ಐಕ್ಯತೆಯ ಬಹುದೊಡ್ಡ ಶಕ್ತಿಯಾಗಿದೆ. ಈ ಐಕ್ಯತೆಯನ್ನು ಮುರಿಯುವ ದೇಶದ್ರೋಹಿಗಳ ಎಲ್ಲಾ ಸವಾಲುಗಳನ್ನು ನಾಗರಿಕರು ಎದುರಿಸಿ ಶಾಂತಿ ನೆಲೆಸಲು ಪಣತೊಡಬೇಕಾಗಿದೆ ಎಂದರು.

ಈ ಸಂದರ್ಭ ಮಾಜಿ ಮೇಯರ್ ಕೆ. ಅಶ್ರಫ್, ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್, ವಿವಿಧ ಸಂಘಟನೆಗಳ ಮುಖಂಡ ರಾದ ಜಲೀಲ್ ಕೃಷ್ಣಾಪುರ, ಆಸೀಫ್ ಡೀಲ್ಸ್, ಸಮೀನಾ ಅಫ್ಸಾನಾ, ಹರಿಣಿ, ಸುಹೈಲ್ ಫಳ್ನೀರ್, ಅಶ್ರಫ್ ಮಂಚಿ, ನವಾಝ್ ಉಳ್ಳಾಲ್, ಮುನೀಬ್ ಬೆಂಗರೆ, ಉಮರ್ ಯು.ಎಚ್ ಮತ್ತಿತರರು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News