ದಿಲ್ಲಿ ಹಿಂಸಾಚಾರ: ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿನಿ ನಾಪತ್ತೆ

Update: 2020-02-27 16:29 GMT

ಹೊಸದಿಲ್ಲಿ, ಫೆ. 27: ಈಶಾನ್ಯ ದಿಲ್ಲಿಯ ಹಿಂಸಾಚಾರದ ನಡುವೆ ಖಜುರಿ ಖಾಸ್ ಪ್ರದೇಶದಿಂದ ಎರಡು ದಿನಗಳ ಹಿಂದೆ ಪರೀಕ್ಷೆಗ ಹಾಜರಾಗಲು ಶಾಲೆಗೆ ತೆರಳಿದ 13 ವರ್ಷದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

8ನೇ ತರಗತಿಯ ಬಾಲಕಿ ತನ್ನ ಹೆತ್ತವರೊಂದಿಗೆ ಸೋನಿಯಾ ವಿಹಾರ್‌ನ ಉಪನಗರದಲ್ಲಿ ವಾಸಿಸುತ್ತಿದ್ದರು. ಮನೆಯಿಂದ 4.5 ಕಿ.ಮೀ. ದೂರದಲ್ಲಿರುವ ಶಾಲೆಗೆ ಆಕೆ ಸೋಮವಾರ ಬೆಳಗ್ಗೆ ತೆರಳಿದ್ದಳು. ಆದರೆ, ಇದುವರೆಗೆ ಆಕೆ ಹಿಂದಿರುಗಿಲ್ಲ ಎಂದು ಅವರು ತಿಳಿಸಿದ್ದಾರೆ.

 ‘‘ನಾನು ಸಂಜೆ 5.30ಕ್ಕೆ ಆಕೆಯನ್ನು ಶಾಲೆಯಿಂದ ಕರೆದುಕೊಂಡು ಬರಬೇಕಿತ್ತು. ಆದರೆ, ಆ ಸಂದರ್ಭ ಹಿಂಸಾಚಾರ ನಡೆಯುತ್ತಿದ್ದುದರಿಂದ ನನಗೆ ಸಾಧ್ಯವಾಗಲಿಲ್ಲ. ಅನಂತರ ನನ್ನ ಪುತ್ರಿ ನಾಪತ್ತೆಯಾಗಿದ್ದಾಳೆ’’ ಎಂದು ರಿಡೆಮೇಡ್ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿರುವ ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ. ಕಾಣೆಯಾದ ವ್ಯಕ್ತಿಗಳ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News