ಬಂಟ್ವಾಳ ತಾಲೂಕಿನಲ್ಲಿ ಅನಿರೀಕ್ಷಿತ ಮಳೆ

Update: 2020-02-27 16:46 GMT

ಬಂಟ್ವಾಳ, ಫೆ. 27: ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಗುರುವಾರ ಅನಿರೀಕ್ಷಿತವಾಗಿ ಮಳೆ ಸುರಿದಿದ್ದು, ಉಷ್ಣಾಂಷದಿಂದ ಕೂಡಿದ್ದ ವಾತಾವರಣಕ್ಕೆ ತಂಪೆರೆಗಿದೆ.

ಬೆಳಗ್ಗಿನ ಜಾವದ ಸಮಯದಲ್ಲಿ ತುಂತುರು ಮಳೆಯಾಗಿದ್ದು,  ಫರಂಗಿಪೇಟೆ, ತುಂಬೆ, ಕೈಕಂಬ, ಬಿ.ಸಿ.ರೋಡ್, ಬಂಟ್ವಾಳ ಬೈಪಾಸ್, ಮೆಲ್ಕಾರ್, ಕಲ್ಲಡ್ಕ, ಮಾಣಿ ಸಹಿತ ವಿಟ್ಲ ಹೋಬಳಿ ಪ್ರದೇಶಗಳಲ್ಲಿ ಸಾದಾರಣ ಮಳೆ ಸುರಿದಿದೆ. ಬಂಟ್ವಾಳ ವ್ಯಾಪ್ತಿಯಲ್ಲಿ 2.0 ಮಿಲಿ ಮೀಟರ್ ಮಳೆಯಾಗಿದೆ ಎಂದು ತಾಲೂಕು ಆಡಳಿತದ ಮೂಲ ತಿಳಿಸಿದೆ.

ಫೆಬ್ರವರಿ ಆರಂಭವಾಗುತ್ತಿದ್ದಂತೆ ಬಿಸಿಲ ಬೆಗೆ ಹೆಚ್ಚಿದ್ದು ಸೆಕೆಯಿಂದ ಜನರು ಈಗಾಗಲೇ ಕಂಗಾಲಾಗಿದ್ದಾರೆ. ಎತ್ತರ ಪ್ರದೇಶಗಳಲ್ಲಿ ಈಗಾಗಲೇ ನೀರಿನ ಸಮಸ್ಯೆಯೂ ತಲೆದೋರಿದೆ. ಬೆಳಗ್ಗೆ ಸುರಿದ ಮಳೆಯಿಂದ ತಂಪಿನ ವಾತಾವರಣ ಉಂಟಾಯಿತು. ಪೂರ್ವಹ್ನ ಸುಮಾರು 11 ಗಂಟೆಯ ವರೆಗೆ ಮೋಡ ಕವಿದ ವಾತಾವರಣ ಇದ್ದರೂ ಮಧ್ಯಾಹ್ನದ ವೇಳೆ ಎಂದಿನಂತೆ ಸುಡು ಬಿಸಿಲು ಇತ್ತು.

ಅನಿರೀಕ್ಷಿತ ಮಳೆಯಿಂದ ರೈತರು, ಬೆಳೆಗಾರರಿಗೆ ಸಮಸ್ಯೆ ಉಂಟಾಗಿದೆ. ಒಣಗಳು ಹಾಕಿದ್ದ ಅಡಿಕೆ, ಕರಿ ಮೆಣಸು ಮಳೆಗೆ ಒದ್ದೆಯಾಗಿವೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News