ಮಾ.1: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮದನಿ ನಗರದಲ್ಲಿ ಪ್ರತಿಭಟನೆ

Update: 2020-02-27 17:12 GMT

ಮಂಗಳೂರು, ಫೆ. 27: ಕೇಂದ್ರ ಸರಕಾರವು ಜಾರಿಗೆ ತಂದಿರುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ‘ಸಂವಿಧಾನ ಉಳಿಸಿ, ದೇಶ ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ಹಿಂದೂ, ಮುಸ್ಲಿಂ, ಕ್ರೈಸ್ತ ಬಾಂಧವರನ್ನು ಒಳಗೊಂಡ ‘ಸಂವಿಧಾನ ಸಂರಕ್ಷಣಾ ಸಮಿತಿ’ಯ ವತಿಯಿಂದ ಮಾ.1ರಂದು ಮಧ್ಯಾಹ್ನ 2ಕ್ಕೆ ಕುತ್ತಾರ್ ಸಮೀಪದ ಮದನಿ ನಗರ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಸಮಾವೇಶದಲ್ಲಿ ಮಾನವ ಹಕ್ಕುಗಳ ಹೋರಾಟಗಾರರಾದ ತೀಸ್ತಾ ಸೆಟಲ್ವಾದ್ ಮತ್ತು ಶಿವಸುಂದರ್, ಮಾಜಿ ಜಿಲ್ಲಾಧಿಕಾರಿ ಸಶಿಕಾಂತ ಸೆಂಥಿಲ್, ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್, ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಮಜೀದ್ ಖಾನ್, ಸಿಪಿಎಂ ಜಿಲ್ಲಾ ಮುಖಂಡ ಸುನೀಲ್ ಕುಮಾರ್ ಬಜಾಲ್ ಪ್ರಮುಖ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್‌ರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾವೇಶವನ್ನು ಶಾಸಕ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಉಡುಪಿ ಖಾಝಿ ಅಲ್‌ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್, ಬಬ್ಬುಕಟ್ಟೆ ನಿತ್ಯಾಧರ್ ಚರ್ಚ್‌ನ ಪ್ರಧಾನ ಧರ್ಮಗುರು ರೆ. ಫಾ. ಎಲ್ಯಾಸ್ ಡಿಸೋಜ, ಮದನಿ ನಗರ ಜುಮಾ ಮಸೀದಿಯ ಖತೀಬ್ ಮುದ್ರಿಖ ಮದನಿ, ಬಬ್ಬುಕಟ್ಟೆ ಬಿಷಪ್ ಸರ್ಜೆಂಟ್ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ.ಎಂ. ಪ್ರಭುರಾಜ್ ಆಶೀರ್ವಚನ ನೀಡಲಿದ್ದಾರೆ.

ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪಸಾಲಿಯಾನ್, ಎಸ್ಕೆಎಸೆಸ್ಸೆಫ್ ಸಂಘಟನೆಯ ಇಬ್ರಾಹಿಂ ಬಾತಿಶ್ ಎಸ್. ಕೊಡ್ಲಿಪೇಟೆ, ಎಸ್ಸೆಸ್ಸೆಫ್ ಸಂಘಟನೆಯ ಹಾಫಿಝ್ ಸೂಫಿಯಾನ್ ಸಖಾಫಿ ಕಾವಳಕಟ್ಟೆ, ಪತ್ರಕರ್ತ ಅಬ್ದುಲ್ ಖಾದರ್ ಕುಕ್ಕಿಲ, ಎಸ್ಕೆಎಸ್ಸೆಂ ದಅ್ವಾ ಘಟಕದ ಕಾರ್ಯದರ್ಶಿ ಎಂ.ಜಿ. ಮುಹಮ್ಮದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಹಾಜಿ ವೈ. ಅಬ್ದುಲ್ಲ ಕುಂಞಿ, ಹಾಜಿ ಯು.ಕೆ. ಮೋನು, ಹಾಜಿ ಕುಂಞಿ ಅಹ್ಮದ್, ಹಾಜಿ ಎ. ಮೊಯ್ದಿನ್, ಹಾಜಿ ಎ.ಎಚ್. ಮುಹ್ಮೂದ್, ಹಾಜಿ ಶೌಕತ್ ಶೌರಿ, ರೆ. ಫಾ. ಸಂತೋಷ್ ಡಿಸೋಜ, ಇಸ್ಮಾಯೀಲ್ ಬಾಪುಂಞಿ, ಕೆ. ಅಶ್ರಫ್, ಹಾಜಿ ಅರಬಿ ಕುಂಬ್ಳೆ, ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಎಸ್.ಎಂ. ರಶೀದ್, ಹಾಜಿ ಮನ್ಸೂರ್ ಅಹ್ಮದ್, ಹಾಜಿ ಎ.ಕೆ. ಅಹ್ಮದ್, ಹಾಜಿ ಬಿ.ಎಂ. ಶರೀಫ್, ಮುಹಮ್ಮದ್ ಕುಂಞಿ, ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಹಾಜಿ ಎಸ್.ಕೆ. ಖಾದರ್, ಕೃಷ್ಣ ಗಟ್ಟಿ, ಅಬ್ದುಲ್ ಅಝೀಝ್ ಯಾನೆ ಮೈಸೂರು ಬಾವ, ಇಸ್ಮಾಯೀಲ್ ಸಾಗರ್, ಮುಹಮ್ಮದ್ ಪರಪ್ಪು, ಜೀವನ್ ರಾಜ್ ಕುತ್ತಾರು, ಆಲ್ವಿನ್ ಡಿಸೋಜ, ಪದ್ಮನಾಭ ನರಿಂಗಾನ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಕೃಷ್ಣಪ್ಪ ಸಾಲಿಯಾನ್, ಗೌರವ ಸಲಹೆಗಾರರಾದ ಉಮರ್ ಯು.ಎಚ್., ಆಲ್ವಿನ್ ಡಿಸೋಜ, ನವೀನ್ ಡಿಸೋಜ, ಕೋಶಾಧಿಕಾರಿ ಫಾರೂಕ್ ಎಫ್.ಆರ್.ಕೆ., ಉಪಾಧ್ಯಕ್ಷ ಅಬ್ದುಲ್ ರವೂಫ್ ಬಿ., ಕಾರ್ಯದರ್ಶಿ ಮುಸ್ತಫಾ ಮುನ್ನೂರು, ಜೊತೆ ಕಾರ್ಯದರ್ಶಿ ಇಸ್ಮಾಯೀಲ್ ಮುನ್ನೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News