ಸಮಕಾಲೀನ ಸವಾಲುಗಳನ್ನೆದುರಿಸುವ ಶಿಕ್ಷಣದ ಅಗತ್ಯವಿದೆ: ವಿ. ಮುರಳೀಧರನ್

Update: 2020-02-27 18:21 GMT

ಮಂಗಳೂರು : ಪ್ರಾಚೀನ ಜ್ಞಾನ ಪರಂಪರೆಯೊಂದಿಗೆ ಸಮಕಾಲೀನ ಸವಾಲು ಗಳನ್ನು ಎದುರಿಸುವ ಶಿಕ್ಷಣ ಪದ್ಧತಿಯ ನಮ ಗಿಂದು ಬೇಕಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್  ತಿಳಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಕೊಣಾಜೆಯ ಮಂಗಳಾ ಸಭಾಂಗಣದಲ್ಲಿ ಹಮ್ಮಿಕೊಂಡ 38ನೆ ಘಟಿಕೋತ್ಸವ ಸಮಾರಂಭದ ಘಟಿಕೋತ್ಸವ ಭಾಷಣದಲ್ಲಿಂದು ಅವರು ತಿಳಿಸಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ನಮ್ಮ ಪ್ರಾಚೀನ ಜ್ಞಾನ ಪರಂಪರೆಯನ್ನು ಗಮನಿಸಿದಾಗ  ವ್ರತ್ತಿಪರ ಶಿಕ್ಷಣ ಮತ್ತು ಜ್ಞಾನ ಸಂಪಾದನೆ ಜೊತೆಯಾಗಿ ಸಿಗುತ್ತಿತ್ತು. ಶಿಕ್ಷಣ ನಮ್ಮ ಸಮಕಾಲೀನ ಸವಾಲುಗಳನ್ನು ಎದುರಿಸಲು ಪೂರಕವಾಗಿರಬೇಕು. ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿ ಮಾಡಲು ಕರಡು ನೀತಿ ತಯಾರಿಸಲಾಗಿದೆ. ಈ ಶಿಕ್ಷಣ ನೀತಿಯ ಮೂಲಕ ಬಹು ಆಯಾಮಗಳ ಮೂಲಕ ಪದವಿ ಮತ್ತು ಸಂಶೋಧನೆಯವರೆಗೂ ಶಿಕ್ಷಣ ಮುಂದುವರಿಸಲು ಅವಕಾಶವಿದೆ. ಉನ್ನತ  ಶಿಕ್ಷಣದ ಗುಣಮಟ್ಟವನ್ನು ಬಹು ವಿಧಾನದ ಮೂಲಕ ಇನ್ನಷ್ಟು ಹೆಚ್ಚಿಸುವ ಉದ್ದೇಶವನ್ನು ನೂತನ ಶಿಕ್ಷಣ ನೀತಿ ಹೊಂದಿದೆ ಎಂದು ಮುರಳೀಧರನ್ ತಿಳಿಸಿದ್ದಾರೆ.

ದೇಶದ ಮುಂದಿರುವ ಸವಾಲುಗಳಾದ ಅಪೌಷ್ಠಿಕತೆ,ಬಡತನ,ನಿರುದ್ಯೋಗ, ವಿವಿಧ ರೀತಿಯ ಮಾಲಿನ್ಯ, ಮೂಲ ಭೂತ ಸೌಕರ್ಯ ಮತ್ತು ಜೀವ ವೈವಿಧ್ಯದ ಮೇಲಾಗುತ್ತಿರುವ ಸಮಸ್ಯೆಗಳ ಬಗ್ಗೆ ದೇಶದ ಯುವ ಜನರು ಗಮನಹರಿಸಿ ಪರಿಹರಿಸಲು ವಿದ್ಯಾವಂತ ಯುವಜನರ ಪ್ರಮುಖ ಪಾತ್ರವಹಿಸಬೇಕಾಗಿದೆ. 2025ರವೇಳೆಗೆ ಭಾರತ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಯುವ ಜನರನ್ನು ಹೊಂದಿರುವ ದೇಶವಾಗಿ ಮಾರ್ಪಾಡಾಗಲಿದೆ ಎಂದು ಮುರಳೀಧರನ್ ತಿಳಿಸಿದ್ದಾರೆ.

ಮಂಗಳೂರು ವಿಶ್ವ ವಿದ್ಯಾನಿಲಯ ಕರ್ನಾಟಕ ರಾಜ್ಯದ ಕರಾವಳಿಯ ಪ್ರಮುಖ ವಿಶ್ವ ವಿದ್ಯಾನಿಲಯವಾಗಿ ಬೆಳೆದು ಬಂದಿದೆ ಎಂದರು. ಕರ್ನಾಟಕ ಸರಕಾರದ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕುಲಪತಿ ಪ್ರೊ.ಪಿ.ಎಸ್.ಎಡಪಡಿತ್ತಾಯಘಟಿ ಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.

ಘಟಿಕೋತ್ಸವದಲ್ಲಿ ಈ ಬಾರಿ ಶಕ್ತಿ ಶಿಕ್ಷಣ ಸಂಸ್ಥೆ ಗಳ ಸಂಸ್ಥಾಪಕ ಕೆ.ಸಿ.ನಾಯ್ಕ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು. ಮಂಗಳೂರು ವಿ.ವಿ.ಆವರಣದಲ್ಲಿ ನಿರ್ಮಿಸಲಾದ ಯೋಧರ ಸ್ಮಾರಕ 'ಶಹೀದ್ ಸ್ಥಳ'ದ ಉದ್ಘಾಟನೆ ಯನ್ನು ಸಚಿವ ಮುರಳೀಧರನ್ ನೆರವೇರಿಸಿದರು. ಸಮಾರಂಭದಲ್ಲಿ ಕುಲಸಚಿವ (ಆಡಳಿತ) ಎ.ಎಂ.ಖಾನ್, ರವೀಂದ್ರ ಆಚಾರ್ಯ (ಪರೀಕ್ಷಾಂಗ),ವಿಶೇಷ ಅಧಿಕಾರಿ ಜಯಶಂಕರ ಸಿಂಡಿಕೇಟ್ ಮತ್ತು ಶೈಕ್ಷಣಿಕ ಮಂಡಳಿಯ ಸದಸ್ಯರು ಹಾಗೂ ವಿವಿಧ ನಿಕಾಯಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸಮಾರಂಭದಲ್ಲಿ 2 ಡಿ.ಲಿಟ್, 105 ಪಿ.ಎಚ್.ಡಿ, 1916 ಸ್ನಾತಕೋತ್ತರ ಪದವಿ, 4552 ವಿದ್ಯಾರ್ಥಿ ಗಳಿಗೆ ಪದವಿ, 34 ವಿದ್ಯಾರ್ಥಿ ಗಳಿಗೆ ಚಿನ್ನದ ಪದಕ ಹಾಗೂ 120 ನಗದು ಬಹುಮಾನಗಳನ್ನು ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News