ಹೂಡೆ: ಬೆಂಕಿಯಿಂದ ರಕ್ಷಿಸುವ ಕಾರ್ಯಾಗಾರ
ಉಡುಪಿ, ಫೆ.28: ತೋನ್ಸೆ ಹೂಡೆಯ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಬೆಂಕಿಯಿಂದ ರಕ್ಷಿಸುವ ಕಾರ್ಯಾಗಾರ ವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಹ್ಯೂಮ್ಯಾನಿಟಿ ರಿಲೀಫ್ ಸೊಸೈಟಿಯ ರಾಜ್ಯಮಟ್ಟದ ತರಬೇತುದಾರ ಅಮಿರುದ್ದೀನ್ ಕುದ್ರೋಳಿ ಕಾರ್ಯಾಗಾರವನ್ನು ನಡೆಸಿ ಕೊಟ್ಟರು. ಬೆಂಕಿಯಿಂದ ರಕ್ಷಿಣೆ ಪಡೆಯುವ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅತ್ಯಗತ್ಯ. ವಿದ್ಯಾರ್ಥಿ ದೆಸೆಯಲ್ಲಿ ಮಾಹಿತಿ ಪಡೆದುಕೊಂಡರೆ ಮುಂದೆ ಆಗುವ ಅನಾಹುತವನ್ನು ತಪ್ಪಿಸಬಹುದು. ಅಲ್ಲದೇ ತಾವು ಪಡೆದುಕೊಂಡ ಈ ಮಾಹಿತಿಯನ್ನು ಸಮಾಜದ ಇತರರಿಗೂ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ತಗುಲಿದಾಗ ಅದನ್ನು ನಂದಿಸುವುದು ಹೇಗೆ? ಹಾಗೂ ಇತರ ವಸ್ತುಗಳಿಗೆ ಬೆಂಕಿ ತಗುಲಿದಾಗ ನಂದಿಸುವುದು ಹೇಗೆ ? ಎಂಬ ಕುರಿತಾಗಿ ಪ್ರಾತ್ಯಕ್ಷಿಕೆ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಡಾ.ಶಬೀನ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಖಜಾಂಚಿ ಅಬ್ದುಲ್ ಕಾದರ್, ಹಿರಿಯ ಟ್ರಸ್ಟಿ ಮೌಲಾನಾ ಆದಂ ಸಾಹೇಬ್, ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಎಚ್‌ಆರ್ ಎಸ್‌ನ ಸ್ವಯಂ ಸೇವಕ ಮುನಾವರ್ ಮಂಗಳೂರು ಮುಂತಾದವರು ಉಪಸ್ಥಿತರಿದ್ದರು.