ದೆಹಲಿ ಹತ್ಯಾಕಾಂಡ ಖಂಡಿಸಿ ರಾಜ್ಯಾದ್ಯಂತ ಎಸ್ಸೆಸ್ಸೆಫ್ ವತಿಯಿಂದ ಪ್ರತಿಭಟನೆ
ಮಂಗಳೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದ್ದ ದೆಹಲಿ ಹತ್ಯಾಕಾಂಡ ವಿರೋಧಿಸಿ ಭಿತ್ತಿಪತ್ರ ಪ್ರದರ್ಶನ ಇಂದು ರಾಜ್ಯಾದ್ಯಂತ ಐನೂರಕ್ಕೂ ಮಿಕ್ಕ ಯುನಿಟ್ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ನೂರಕ್ಕೂ ಹೆಚ್ಚು ಯುನಿಟ್ ಗಳಲ್ಲಿ ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಬಳ್ಳಾರಿ ಕೊಪ್ಪಳ, ಗಂಗಾವತಿ ಬಾಗಲಕೋಟೆ, ಭಟ್ಕಳ, ಗದಗ, ಬೆಳಗಾವಿ, ರಾಯಚೂರು ಹಾಗೂ ಹಾವೇರಿ ಜಿಲ್ಲೆಯ ವಿವಿಧ ಯುನಿಟ್ ಕೇಂದ್ರಗಳಲ್ಲಿ ಬಿತ್ತಿಪತ್ರ ಪ್ರದರ್ಶನ, ದೆಹಲಿ ಹತ್ಯಾಕಾಂಡ ವಿರೋಧಿಸಿ ಘೋಷಣೆ ಗಳು, ಭಾಷಣಗಳು ಹಾಗೂ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿಗಳನ್ನು ನೀಡಿ ಘಟನೆಯನ್ನು ಖಂಡಿಸಲಾಯಿತು.
ಮೂವತ್ತಕ್ಕೂ ಮಿಕ್ಕ ಜೀವಗಳು ಬಲಿ ತೆಗೆದುಕೊಂಡರೂ ಮೌನ ಮುರಿಯದ ಕೇಂದ್ರ ಸರಕಾರದ ಮೌನ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು. ಕೇಂದ್ರದಲ್ಲಿ ಗೃಹಮಂತ್ರಿಗಳು ಇದ್ದರೂ ಇಲ್ಲದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಕೇಂದ್ರ ಸರ್ಕಾರ ಮೌನ ಮುರಿದು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯನ್ನು ನೀಡುವವರೆಗೂ ಈ ರೀತಿಯ ಪ್ರತಿಭಟನೆಗಳು ಮುಂದುವರೆಯುತ್ತದೆ ಎಂದು ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಗುರುವಾಯನಕೆರೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ಹೇಳಿದರು.