ಫೆ.29ರಂದು ಅಬ್ಬಕ್ಕ ಉತ್ಸವಕ್ಕೆ ಚಾಲನೆ

Update: 2020-02-28 14:58 GMT

ಮಂಗಳೂರು, ಫೆ.28: ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಫೆ.29ರಂದು ಚಾಲನೆ ದೊರೆಯಲಿದೆ. ಅಬ್ಬಕ್ಕ ಉತ್ಸವ ಉದ್ಘಾಟನಾ ಸಮಾರಂಭವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂಜೆ 5 ಗಂಟೆಗೆ ಅಸೈಗೋಳಿ ಕೇಂದ್ರ ಮೈದಾನದಲ್ಲಿ ನೆರವೇರಿಸಲಿದ್ದಾರೆ.

ಇದಕ್ಕೂ ಮುನ್ನ ಮಧ್ಯಾಹ್ನ 3:30ಕ್ಕೆ ಅಬ್ಬಕ್ಕ ಉತ್ಸವ ಮೆರವಣಿಗೆಯ ಉದ್ಘಾಟನೆಯನ್ನು ಮಂಗಳೂರು ಶಾಸಕ ಯು.ಟಿ. ಖಾದರ್ ದೇರಳಕಟ್ಟೆಯಲ್ಲಿ ನೆರವೇರಿಸಲಿದ್ದಾರೆ. ನಾಡಿನ ವಿವಿಧ ಕಲಾತಂಡಗಳು ಆಕರ್ಷಕ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ದೇರಳಕಟ್ಟೆಯಿಂದ ಅಸೈಗೋಳಿವರೆಗೆ ಈ ಮೆರವಣಿಗೆ ಸಾಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಅಂದು ಮಧ್ಯಾಹ್ನ 3:45ಕ್ಕೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಅಬ್ಬಕ್ಕನ ಬಗ್ಗೆ ಕಿರುನಾಟಕ, ಸಂಜೆ 4:15ಕ್ಕೆ ಬ್ಯಾರಿ ಸಾಂಸ್ಕೃತಿಕ ವೈವಿಧ್ಯ, ಸಂಜೆ 4:30ಕ್ಕೆ ಕೊಂಕಣಿ ಸಾಂಸ್ಕೃತಿಕ ವೈವಿಧ್ಯ, 4:45ಕ್ಕೆ ಮಂಗಳೂರು ಮೋಹಿತ ಮತ್ತು ಬಳಗ ವತಿಯಿಂದ ಅಬ್ಬಕ್ಕ ಸ್ವಾಗತ ನೃತ್ಯ, ಸಂಜೆ 6ಕ್ಕೆ ಬೆಂಗಳೂರು ಸಂಗೀತ ಕಟ್ಟಿ ವತಿಯಿಂದ ಸಂಗೀತ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಭೋಜರಾಜ್ ವಾಮಂಜೂರು ಅವರಿಂದ ಹಾಸ್ಯ ಕಾರ್ಯಕ್ರಮ, ರಾತ್ರಿ 9:30ಕ್ಕೆ ಮಂಗಳೂರು ಲಾವಣ್ಯ ಮತ್ತು ಬಳಗ ವತಿಯಿಂದ ನೃತ್ಯ ಸಂಗಮ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News