ಅಮೆರಿಕ-ತಾಲಿಬಾನ್ ಶಾಂತಿ ಒಪ್ಪಂದ ಸಮಾರಂಭದಲ್ಲಿ ಭಾರತ ಉಪಸ್ಥಿತಿ

Update: 2020-02-28 15:16 GMT

ದೋಹಾ (ಕತರ್), ಫೆ. 28: ಕತರ್ ರಾಜಧಾನಿ ದೋಹಾದಲ್ಲಿ ಶನಿವಾರ ಅಮೆರಿಕ ಮತ್ತು ತಾಲಿಬಾನ್ ಮಹತ್ವದ ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕಲಿವೆ. ಈ ಸಂದರ್ಭದಲ್ಲಿ ಕತರ್‌ಗೆ ಭಾರತದ ರಾಯಭಾರಿ ಉಪಸ್ಥಿತರಿರುತ್ತಾರೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳ ವಾಪಸಾತಿಗೆ ಈ ಒಪ್ಪಂದವು ಅನುವು ಮಾಡಿಕೊಡಲಿದೆ. 2001ರಿಂದ ಅಮೆರಿಕವು ಅಫ್ಘಾನಿಸ್ತಾನದಲ್ಲಿ 2,400ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡಿದೆ.

ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭಕ್ಕೆ ಕತರ್ ಸರಕಾರವು ಭಾರತವನ್ನು ಆಹ್ವಾನಿಸಿದೆ ಹಾಗೂ ಭಾರತೀಯ ರಾಯಭಾರಿ ಪಿ. ಕುಮಾರನ್ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ ಎಂದು ಮೂಲಗಳು ಹೇಳಿವೆ.

ತಾಲಿಬಾನ್ ಉಪಸ್ಥಿತಿಯಿರುವ ಸಮಾರಂಭವೊಂದರಲ್ಲಿ ಭಾರತ ಅಧಿಕೃತವಾಗಿ ಭಾಗವಹಿಸುವುದು ಇದೇ ಮೊದಲ ಬಾರಿಯಾಗಿದೆ.

ಅಫ್ಘಾನಿಸ್ತಾನದ ಶಾಂತಿ ಮತ್ತು ರಾಜಿ ಪ್ರಕ್ರಿಯೆಯಲ್ಲಿ ಭಾರತ ಪ್ರಮುಖ ಭಾಗೀದಾರ ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News