ಕೊರೋನವೈರಸ್ ನಿಂದ ‘ಹ್ಯುಂಡೈ’ ಕಾರು ಕಾರ್ಖಾನೆಯೇ ಬಂದ್!

Update: 2020-02-28 15:29 GMT

ಸಿಯೋಲ್ (ದಕ್ಷಿಣ ಕೊರಿಯ), ಫೆ. 28: ಹ್ಯುಂಡೈ ಮೋಟರ್‌ನ ಕೆಲಸಗಾರನೊಬ್ಬನಲ್ಲಿ ಕೊರೋನವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ, ದಕ್ಷಿಣ ಕೊರಿಯದ ಉಲ್ಸಾನ್ ನಗರದಲ್ಲಿರುವ ಕಾರ್ಖಾನೆಯಲ್ಲಿ ಕಾರು ಉತ್ಪಾದನೆಯನ್ನು ನಿಲ್ಲಿಸಲು ಕಂಪೆನಿ ನಿರ್ಧರಿಸಿದೆ.

ಈ ಸುದ್ದಿಯ ಬಳಿಕ ಕಾರು ತಯಾರಿಕಾ ಕಂಪೆನಿಯ ಶೇರು ಮೌಲ್ಯ 5 ಶೇಕಡಕ್ಕೂ ಹೆಚ್ಚು ಕುಸಿದಿದೆ.

ಕೊರೋನವೈರಸ್ ಸಾವಿಗೆ ಸಂಬಂಧಿಸಿ, ಚೀನಾದ ಬಳಿಕ ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯವಿದೆ. ಮಾರಕ ರೋಗವು ಸ್ಯಾಮ್ಸಂಗ್ ಮತ್ತು ಹ್ಯುಂಡೈ ಮುಂತಾದ ಬಹುರಾಷ್ಟ್ರೀಯ ಕಂಪೆನಿಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರಿದೆ.

ದಕ್ಷಿಣ ಕೊರಿಯದಲ್ಲಿ ಶುಕ್ರವಾರ ಹೊಸದಾಗಿ 256 ಕೊರೋನವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿಗೊಳಗಾದವರ ಒಟ್ಟು ಸಂಖ್ಯೆ 2,022ಕ್ಕೆ ಏರಿದೆ.

 ‘‘ಸೋಂಕಿಗೆ ಒಳಗಾಗಿರುವ ಕೆಲಸಗಾರನ ನೇರ ಸಂಪರ್ಕದಲ್ಲಿದ್ದ ಕೆಲಸಗಾರರನ್ನೂ ಕಂಪೆನಿಯು ಪ್ರತ್ಯೇಕವಾಗಿಟ್ಟಿದೆ ಹಾಗೂ ಅವರಿಗೆ ಸೋಂಕು ತಗಲಿದೆಯೇ ಎಂಬುದನ್ನು ಪತ್ತೆಹಚ್ಚಲು ಅವರನ್ನು ಪರೀಕ್ಷೆಗೆ ಒಡ್ಡಿದೆ’’ ಎಂದು ಹ್ಯುಂಡೈ ಮೋಟರ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News