ನೈಜೀರಿಯದಲ್ಲಿ ಮೊದಲ ಕೊರೋನವೈರಸ್ ಸೋಂಕು ಪತ್ತೆ

Update: 2020-02-28 15:34 GMT

ಲಾಗೋಸ್ (ನೈಜೀರಿಯ), ಫೆ. 28: ನೈಜೀರಿಯದಲ್ಲಿ ಪ್ರಥಮ ಕೊರೋನವೈರಸ್ ಪ್ರಕರಣ ಪತ್ತೆಯಾಗಿದೆ ಎಂದು ಸರಕಾರ ಶುಕ್ರವಾರ ಪ್ರಕಟಿಸಿದೆ. ಇದು ಉಪ ಸಹಾರ ಆಫ್ರಿಕದ ಮೊದಲ ಕೊರೋನ ಸೋಂಕು ಕೂಡಾ ಆಗಿದೆ.

ನೈಜೀರಿಯದಲ್ಲಿ ಕೆಲಸ ಮಾಡುತ್ತಿರುವ ಇಟಲಿ ಪ್ರಜೆ ಸೋಂಕಿಗೊಳಗಾದ ವ್ಯಕ್ತಿಯಾಗಿದ್ದಾರೆ. ಅವರು ಈ ವಾರ ಇಟಲಿಯ ಮಿಲಾನ್‌ನಿಂದ ನೈಜೀರಿಯಕ್ಕೆ ವಾಪಸಾಗಿದ್ದರು ಎಂದು ನೈಜೀರಿಯದ ಆರೋಗ್ಯ ಸಚಿವ ಒಸಾಗೀ ಎಹಾನಿರೆ ಟ್ವಿಟರ್‌ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ತಿಳಿಸಿದರು.

‘‘ರೋಗಿಯ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಹಾಗೂ ಯಾವುದೇ ಗಂಭೀರ ರೋಗ ಲಕ್ಷಣಗಳಿಲ್ಲ. ಅವರಿಗೆ ಲಾಗೋಸ್‌ನ ಯಾಬದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News