ಅಕ್ರಮ ಸಾಗಾಟ: ಜಾನುವಾರು ವಶ

Update: 2020-02-28 16:29 GMT

ಕಾಪು, ಫೆ.28: ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಜಾನುವಾರುಗಳನ್ನು ಕಾಪು ಪೊಲೀಸರು ಫೆ. 27ರಂದು ರಾತ್ರಿ ವೇಳೆ ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿಯಲ್ಲಿ ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ದಾಳಿ ವೇಳೆ ಹಮ್ಮಬ್ಬ, ಕಬೀರ್ ಮತ್ತು ರಿಝ್ವಾನ್ ಎಂಬವರು ಪರಾರಿಯಾಗಿದ್ದಾರೆ. ಪಿಕ್‌ಅಪ್ ವಾಹನ ಸೇರಿದಂತೆ ಅದರಲ್ಲಿದ್ದ ನಾಲ್ಕು ದನ, ಮೂರು ಕರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News