ಮುಹಮ್ಮದ್ ಕೆರೆಕಾಡುಗೆ ‘ಕದಂಬ ಪ್ರಶಸ್ತಿ’ಯ ಗರಿ

Update: 2020-02-28 16:59 GMT

ಮಂಗಳೂರು, ಫೆ. 28: ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ವಿಶ್ವ ಕನ್ನಡಿಗರು ಮೆಚ್ಚುವಂತಹ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಕನ್ನಡದ ಕಂಪನ್ನು ಬೀರಿದ ಕದಂಬರ ವಂಶದ ಗೌರವ ಸೂಚಕವಾಗಿ ಪ್ರತೀ ವರ್ಷವೂ ನೀಡುತ್ತಿರುವ ಕದಂಬ ಪ್ರಶಸ್ತಿಗೆ ಕೆ.ಮುಹಮ್ಮದ್ ಕೆರೆಕಾಡು ಅವರು ಆಯ್ಕೆಯಾಗಿದ್ದಾರೆ.

ಕೆ. ಮುಹಮ್ಮದ್ ಕೆರೆಕಾಡು ಅವರು ಯಾವುದೇ ಫಲಾಪೇಕ್ಷೆಗಳಿಲ್ಲದೆ, ತನ್ನದೇ ಆದ ಸಾದಾತ್ ವಲೀ ಝಿಕ್ರ್ ಮಜ್ಲಿಸ್ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಹಲವು ವರ್ಷಗಳಿಂದ ಸಮಾಜದಲ್ಲಿ ಬಡತನದ ಕಾರಣದಿಂದಾಗಿ ವಿವಾಹ ಕಾರ್ಯಗಳನ್ನು ನಡೆಸಲಾಗದ ಬಡ ತಂದೆ ತಾಯಿಗೆ ಹೆಗಲಾಗಿ ಉಚಿತ ಸಾಮೂಹಿಕ ವಿವಾಹ ನಡೆಸುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಈ ವರೆಗೂ ನೂರಕ್ಕೂ ಅಧಿಕ ಜೋಡಿಗೆ ವಿವಾಹ ನಡೆದಿದ ಕೀರ್ತಿ ಇವರಿಗೆ ಸಲ್ಲಿತ್ತದೆ.

ಸಾಮೂಹಿಕ ಉಚಿತ ಮುಂಜಿಯಂತಹಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯ ಕಾಪು ಪ್ರದೇಶದಲ್ಲಿ ಟ್ರಸ್ಟ್‌ನ ಅಧೀನದಲ್ಲಿ ಸಾದಾತ್ ವಲೀ ವೃದ್ಧಾಶ್ರಮವನ್ನೂ ನಡೆಸುತ್ತಿದ್ದು, ಹಲವು ಮಂದಿಗೆ ಆಶ್ರಯದಾತರಾಗಿದ್ದಾರೆ.

ಇವರ ಸಾಮಾಜಕ್ಕೆ ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿರುವ ಮುಹಮ್ಮದ್ ಹಾಜಿ ಕಕ್ಕುವಳ್ಳಿಯವರ ನಿರ್ದೇಶನದ ಮೇರೆಗೆ ಆಯ್ಕೆ ಸಮಿತಿ ಕೆ. ಮುಹಮ್ಮದ್ ಅವರನ್ನು ಆಯ್ಕೆ ಮಾಡಿದೆ.

ಫೆ.29ರಂದು ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಾನಪದ ಉತ್ಸವ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ (ಸ್ವಾಭಿಮಾನಿ ಬಣ) ರಾಜ್ಯಾಧ್ಯಕ್ಷರಾಗಿರುವಪಿ. ಕೃಷ್ಣೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಲಿ ದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News