ಜಾಫ್ರಾಬಾದ್‌ಗೆ ಭೇಟಿ ನೀಡಿದ ಎನ್‌ಸಿಡಬ್ಲು ಅಧ್ಯಕ್ಷೆ

Update: 2020-02-28 17:24 GMT

ಹೊಸದಿಲ್ಲಿ, ಫೆ. 29: ಈಶಾನ್ಯ ದಿಲ್ಲಿ ಹಿಂಸಾಚಾರದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆಯೇ ಎಂಬುದನ್ನು ಪತ್ತೆ ಮಾಡಲು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲು)ದ ಅಧ್ಯಕ್ಷೆ ರೇಖಾ ಶರ್ಮಾ ಅವರು ಆಯೋಗದ ಇತರ ಇಬ್ಬರು ಸದಸ್ಯರೊಂದಿಗೆ ಶುಕ್ರವಾರ ಜಾಫ್ರಾಬಾದ್ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

 ಹಿಂಸಾಚಾರ ಪೀಡಿತ ಜಾಫ್ರಾಬಾದ್ ಪ್ರದೇಶಕ್ಕೆ ಭೇಟಿ ನೀಡುವ ಮುನ್ನ ಡಿಸಿಪಿ ಈಶಾನ್ಯ ಜಿಲ್ಲೆಯ ಕಚೇರಿಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ ನೀಡಿತು. ಅನಂತರ ಜಾಫ್ರಾಬಾದ್‌ಗೆ ತೆರಳಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ ರೇಖಾ ಶರ್ಮಾ, ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ. ಆದರೆ, ಸ್ಪಲ್ಪ ಉದ್ವಿಗ್ನತೆ ಇದೆ ಎಂದು ತಿಳಿಸಿದ್ದಾರೆ. ಶನಿವಾರ ಮತ್ತೆ ಈ ಪ್ರದೇಶಕ್ಕೆ ಭೇಟಿ ನೀಡಿದ್ದೇವೆ ಎಂದು ರೇಖಾ ಶರ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News