'ಆಳ್ವಾಸ್ ಮೀಡಿಯಾ ಬಝ್ - 2020'

Update: 2020-02-28 17:24 GMT

ಮೂಡುಬಿದಿರೆ : ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಹಾಗೂ ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆಯಲಿರುವ `ಮೀಡಿಯಾ  ಆ್ಯಂಡ್ ಕ್ಲೈಮೇಟ್ ಆ್ಯಕ್ಷನ್' ವಿಚಾರದ ಕುರಿತು ನಡೆದ ಅಂತರಾಷ್ಟ್ರೀಯ ಸಮ್ಮೇಳನ ಮತ್ತು `ಮೀಡಿಯಾ ಬಝ್ - 2020' ಮಾಧ್ಯಮೋತ್ಸವವನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‍ನ ಆದಾಯ ತೆರಿಗೆಯ ಡೈರೆಕ್ಟರ್ ಜನರಲ್ ನರೋತ್ತಮ್ ಮಿಶ್ರ ಶುಕ್ರವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಪ್ರಕೃತಿಯು ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತಿದ್ದು ಅದನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಪ್ರಕೃತಿಯು ಸಮತೋಲನದಲ್ಲಿದ್ದರೆ ನಾವು ಬದುಕಲು ಸಾಧ್ಯ. ಪ್ರಕೃತಿ ಮುನಿಸಿಕೊಂಡರೆ ಬದುಕು ಸರ್ವನಾಶವಾಗುವುದು ಖಚಿತ. ಪ್ರಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ನಾವು ಕಾರ್ಯ ನಿರ್ವಹಿಸಬಹುದು ಎಂಬುದನ್ನು ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ನಕಾರಾತ್ಮಕ ವಿಚಾರಗಳನ್ನು ಬದಿಗೊತ್ತಿ ಪ್ರತಿಯೊಂದು ಸೂಕ್ಷ್ಮ ವಿಚಾರದ ಕುರಿತು ಅರಿವನ್ನು ಮೂಡಿಸುವುದು ಮಾಧ್ಯಮಗಳ ಮೂಲಭೂತ ಕರ್ತವ್ಯವಾಗಿದೆ ಎಂದರು.

ಉಡುಪಿ ಪವರ್ ಕಾರ್ಪೋರೇಷನ್ ಪ್ರವೆಟ್ ಲಿಮಿಟೆಡ್‍ನ ಅಧ್ಯಕ್ಷ ಮತ್ತು ಎಕ್ಸಿಕ್ಯೂಟಿವ್‍ಡೈರೆಕ್ಟರ್ ಕಿಶೋರ್ ಆಳ್ವ  ಮುಖ್ಯ ಅತಿಥಿಯಾಗಿ ಮಾತನಾಡಿ ಪ್ರಕೃತಿಯ ಮೇಲೆ ಕಾಳಜಿ ತೋರಿದರೆ, ಅದು ನಮ್ಮ ಕಾಳಜಿಯನ್ನು ವಹಿಸುತ್ತದೆ. ಪರಿಸರ ಪ್ರತ್ರಿಕೋದ್ಯಮವು ಅನೇಕ ವಿಚಾರಗಳನ್ನು ಒಳಗೊಂಡಿರುವಂತಹ ಕ್ಷೇತ್ರ. ಈ ಕ್ಷೇತ್ರದಲ್ಲಿ ಕಾರ್ಯಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಪರಿಸರದಲ್ಲಿನ ವಿವಿಧ ವಿಚಾರಗಳ ಕುರಿತಾದ ಜ್ಞಾನವನ್ನು ಹೊಂದಿರಬೇಕು.ಆಗ ಮಾತ್ರ ಪ್ರಕೃತಿಯ ಕುರಿತಾಗಿ ಜನರಲ್ಲಿ ಅರಿವನ್ನು ಮೂಡಿಸಲು ಸಾಧ್ಯ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾಣೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆಯನ್ನು ವಹಿಸಿದರು.  
ಕಾರ್ಯಕ್ರಮದಲ್ಲಿ ಇಸ್ರೋದ ಅರ್ತ್‍ಅಬ್ಸರ್ವೇಶನ್ ಅಪ್ಲಿಕೇಶನ್ಸ್ ಮತ್ತು ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಪ್ರೋಗ್ರಾಮ್‍ನ ವಿಜ್ಞಾನಿ ಮತ್ತು ನಿರ್ದೇಶಕ ಪಿ.ಈ ದಿವಾಕರ್, ಉದ್ಯಮಿ ಕೆ.ಶ್ರೀಪತಿ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ್ ಪೆಜತ್ತಾಯ, ಪದವಿ ಕಲಾ ವಿಭಾಗದ ಡೀನ್ ಸಂಧ್ಯಾ.ಕೆ.ಎಸ್, ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಉಪಸ್ಥಿತರಿದ್ದರು.

ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಗ್ರೇಶಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಇಕೋಲಿಂಕ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಥಾಮಸ್ ಸ್ಕರಿಯ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News